Belagavi NewsBelgaum NewsKannada NewsKarnataka NewsNationalPolitics

*ಶಾಲಾ ಮಕ್ಕಳ ಕುಡಿಯುವ ನೀರಿಗೆ ವಿಷ ಬೆರೆಸಿದ ಮೂವರು ದುರುಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ನೀರಿನಲ್ಲಿ ವಿಷ ಸೇರಿಸಿದ ಮೂವರನ್ನು  ಸವದತ್ತಿ ಪೊಲೀಸರು ಬಂಧಿಸಿದ್ದಾರೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ತಿಳಿಸಿದ್ದಾರೆ.‌

ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದವ 15 ದಿನಗಳ ಹಿಂದೆ ವಿಷನೀರು ಸೇವಿಸಿ ಅಸ್ವಸ್ಥಗೊಂಡಿದ್ದ  ಸರ್ಕಾರಿ ಶಾಲೆ ಮಕ್ಕಳುನ್ನು ಆಸ್ಪತ್ರೆಗೆ ಸೇರಿ ಚಿಕಿತ್ಸೆ ನೀಡಲಾಗಿತ್ತು. ಅದೆ ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಮುಖ್ಯ ಶಿಕ್ಷಕನ್ನು ಶಾಲೆಯಿಂದ ಓಡಿಸಲು ವಿಷ ಮಿಶ್ರಿತ ನೀರು ‌ಸೇವಿಸಿ ಮಕ್ಕಳು ಮರಣಹೊಂದಿದ್ರೆ ಮುಖ್ಯ ಶಿಕ್ಷಕನನ್ನು ಹೊಣೆ ಮಾಡಿ ವರ್ಗಾಯಿಸಬಹುದು ಎಂದು ಅದೆ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲ್ ಪ್ಲ್ಯಾನ್ ಮಾಡಿದರು. 

ಈ ಆರೋಪಿ ಸಾಗರ ಪಾಟೀಲ್ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ. ವಿಷ ಬೆರೆಸಲು ಕೃಷ್ಣಾ ಮಾದರ ಎಂಬಾತನಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ.‌ ಕೃಷ್ಣಾ ಮಾದರ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ. ನಾನು ಹೇಳುವ ಕೆಲಸ ಮಾಡದಿದ್ರೆ ನಿನ್ನ ಪ್ರೀತಿಯ ವಿಷಯ ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ.‌ ಇದಕ್ಕೆ ಬೆದರಿ ನೀರಿನಲ್ಲಿ ವಿಷ ಸೇರಿಸಲು ಕೃಷ್ಣಾ ಮಾದರ ಒಪ್ಪಿಕೊಂಡಿದ್ದಾನೆ.‌ ಆಗ ಸಾಗರ ಸಂಬಂಧಿ ನಾಗನಗೌಡ ಜೊತೆಗೆ ಮುನವಳ್ಳಿಗೆ ಹೋಗಿ ಕೃಷ್ಣಾ ಕೀಟನಾಶಕ ತಂದಿದ್ದಾನೆ. ಬಳಿಕ ಕೃತ್ಯಕ್ಕೆ ಅದೇ ಶಾಲೆಯ ಅಮಾಯಕ ಬಾಲಕನನ್ನು ಬಳಸಿ ಹಣ ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ.‌  ನೀರಿನಲ್ಲಿ ವಿಷ ಸೇರಿಸಿ ನೀಚ ಕೃತ್ಯ ಎಸಗಿದ್ದ ಮೂವರು ಯುವಕರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. 

Home add -Advt

Related Articles

Back to top button