Belagavi NewsBelgaum NewsKannada NewsKarnataka NewsLatest

ವಿದ್ಯುತ್ ಶಾಕ್ ನಿಂದ ಅಜ್ಜ, ಅಜ್ಜಿ, ಮೊಮ್ಮಗಳ ದಾರುಣ ಸಾವು; ಬೆಳಗಾವಿ ನಗರದಲ್ಲಿ ಬೆಳ್ಳಂಬೆಳಗ್ಗೆ ಅವಘಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್ ಶಾಕ್ ನಿಂದ ಇಲ್ಲಿನ ಶಾಹುನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಅವಘಡ ನಡೆದಿದ್ದು ಅಜ್ಜ, ಅಜ್ಜಿ, ಮೊಮ್ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ.

ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದಿಂದ ಬಂದು ಶಾಹುನಗರದಲ್ಲಿ ವಾಚಮನ್ ಕೆಲಸ ಮಾಡುತ್ತಿದ್ದ ಈರಪ್ಪಾ ಲಮಾಣಿ (50), ಶಾಂತವ್ವ ಲಮಾಣಿ (45) ಹಾಗೂ ಇವರ ಮೊಮ್ಮಗಳು ಅನ್ನಪೂರ್ಣ ಲಮಾಣಿ ( 8) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮನೆಯಲ್ಲಿ ನೀರು ಕಾಯಿಸಲು ಕ್ವಾಯಿಲ್ ಹಾಕಿದ ಸಂದರ್ಭದಲ್ಲಿ ಅದನ್ನು ತೆಗೆಯಲು ಹೋದ ವೇಳೆ ಮೂವರು ಮೃತಪಟ್ಟಿದ್ದಾರೆ. ಮೊಮ್ಮಗಳನ್ನು ಕಾಪಾಡಲು ಹೋಗಿ ಅಜ್ಜ ಹಾಗೂ ಅಜ್ಜಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button