ಪ್ರಗತಿ ವಾಹಿನಿ ಸುದ್ದಿ; ಮುಂಬೈ: ಐಪಿಎಲ್ನಲ್ಲಿ ಕ್ರಿಕೇಟ್ ಪ್ರೇಮಿಗಳಿಗೆ ಸಿಕ್ಸರ್ ಬೌಂಡರಿಗಳ ಸುರಿಮಳೆ ರಸದೌತಣ ನೀಡುತ್ತಿದ್ದರೆ ಆಫ್ ಫೀಲ್ಡ್ ನಲ್ಲಿ ಕ್ರಿಕೇಟಿಗರು ಮಾಡುವ ಜೋಕ್ಗಳು ಸಹ ಖುಷಿ ನೀಡುತ್ತಿವೆ. ಇಂತದ್ದೇ ಇಂದು ಜೋಕ್ ಈಗ ಟ್ವಿಟರ್ನಲ್ಲಿ ಕಾಮೆಂಟ್ರೇಟರ್ ಆಕಾಶ್ ಛೋಪ್ರಾ ಮತ್ತು ರಾಜಸ್ತಾನ್ ರಾಯಲ್ಸ್ ನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ನಡುವಿನ ಮೆಸೇಜ್ಗಳ ಮೂಲಕ ಹೊರ ಹೊಮ್ಮಿದೆ.
ಮೊನ್ನೆಯ ಪಂದ್ಯದಲ್ಲಿ ಪಿಬಿಕೆಎಸ್ನ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರು ದಾಖಲೆಯ ಸಿಕ್ಸರ್ ಒಂದನ್ನು ಬಾರಿಸಿದ್ದರು. ಬರೋಬ್ಬರಿ 108 ಮೀಟರ್ ದೂರಕ್ಕೆ ಇವರ ಸಿಕ್ಸರ್ ಮೂಕಲ ಚೆಂಡು ಹಾರಿತ್ತು. ಇದನ್ನು ಉಲ್ಲೇಕಿಸಿ ಕಾಮೆಂಟ್ರೇಟರ್ ಆಕಾಶ್ ಛೋಪ್ರಾ 100 ಮೀಟರ್ಗಿಂತ ದೂರ ಸಿಡಿದ ಸಿಕ್ಸರ್ಗೆ ೮ ರನ್ ನೀಡಬೇಕು ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ತತ್ ಕ್ಷಣ ಪ್ರತಿಕ್ರಿಯೆ ನೀಡಿರುವ ಯಜುವೇಂದ್ರ ಚಹಾಲ್ ಹಾಗಿದ್ದರೆ ಸತತ ಮೂರು ಡಾಟ್ ಬಾಲ್ಬಳಿಗೆ ಒಂದು ವಿಕೇಟ್ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ. ಯಜುವೇಂದ್ರ ಚಹಾಲ್ ಟ್ವೀಟ್ಗೆ ಆಕಾಶ್ ಚೋಪ್ರಾ ಸೇರಿದಂತೆ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ. ಅಲ್ಲದೇ ಸುರೇಶ್ ರೈನಾ ಸೇರಿದಂತೆ ಅನೇಕ ಕ್ರಿಕೇಟಿಗರು ಸಹ ಚಹಾಲ್ ಅವರ ಕ್ವಿಕ್ ರೆಸ್ಪಾನ್ಸ್ಗೆ ನಗುವಿನ ಇಮೋಜಿ ಹಾಕುವ ಮೂಲಕ ಖುಷಿ ಪಟ್ಟಿದ್ದಾರೆ.
ಅನೀಲ್ ಕುಂಬ್ಳೆ ಕುರಿತು ವಿರಾಟ್ ಕೋಹ್ಲಿ ಮಾಡಿದ್ದ ಗಂಭೀರ ಆರೋಪವೇನು ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ