ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಕಳೆದ 10 ವರ್ಷಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದ ಮೂವರು ಒಡಹುಟ್ಟಿದವರನ್ನು ರಕ್ಷಣೆ ಮಾಡಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.
10 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಬಂಧಿಯಾಗಿದ್ದರು. ಮಾನಸಿಕ ಖಿನ್ನತೆ ಒಳಗಾಗಿದ್ದ ಮೂವರೂ ಕತ್ತಲೆ ಕೋಣೆ ಸೇರಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಾಥಿ ಸೇವಾ ಗ್ರೂಪ್ ಎಂಬ ಎನ್ ಜಿಓ, ಇದೀಗ ಮೂವರನ್ನು ರಕ್ಷಿಸಿದೆ.
ರಕ್ಷಿಸಲ್ಪಟ್ಟವರನ್ನು ಅಮರೇಶ್ ಮೆಹ್ತಾ (42), ಮೇಘನಾ ಮೆಹ್ತಾ (39) ಹಾಗೂ ಭವೇಶ್ ಮೆಹ್ತಾ (30) ಎಂದು ಗುರುತಿಸಲಾಗಿದೆ. ಮೂವರೂ ಕೂಡ ಪದವೀಧರರಾಗಿದ್ದು, ಅಮರೇಶ್ ಬಿಎ, ಎಲ್ ಎಲ್ ಬಿ ಓದಿದ್ದರೆ ಮೇಘನಾ ಮನ:ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭವನೇಶ್ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದು, ಕ್ರಿಕೆಟ್ ಆಟಗಾರನಾಗಿದ್ದಾನೆ. ಇವರು ಕತ್ತಲೆ ಕೋಣೆ ಸೇರಲು ಕಾರಣ ನಿಖರವಾಗಿ ಗೊತ್ತಾಗಿಲ್ಲ.
ಇವರ ತಂದೆ ನವೀನ್ ಭಾಯ್ ಹೇಳುವ ಪ್ರಕಾರ, ಇವರ ತಾಯಿ ಅನಾರೋಗ್ಯಕ್ಕೀಡಾದ ಬಳಿಕ ಮೂವರು ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ತಾಯಿ ಮೃತಪಟ್ಟಿದ್ದು, ಆಗಿನಿಂದ ಮೂವರು ಕತ್ತಲೆ ಕೋಣೆ ಸೇರಿಕೊಂಡರು. ಕೆಲವರು ಇವರ ಮೇಲೆ ಮಾಟಮಂತ್ರ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ