*ಕಿತ್ತೂರು ಕಿಡ್ನಾಪ್ ಪ್ರಕರಣದ ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ: ಎಸ್ ಪಿ*
ಪ್ರಗತಿವಾಹಿನಿ ಸುದ್ದಿ: ಕಿತ್ತೂರಿನಲ್ಲಿ ನಡೆದ ಬಿಜೆಪಿ ಪಟ್ಟಣ ಪಂಚಾಯಿತಿ ಸದಸ್ಯನ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೈಲಹೊಂಗಲ ಡಿಎಸ್ ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆದಸಲಾಗಿದೆ ಎಂದು ಎಸ್ ಪಿ ಡಾ. ಭೀಮಾಶಂಕರ ಗುಳೇದ ಅವರು ತಿಳಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಿತ್ತೂರಿನಲ್ಲಿ ಒಂದು ಕಿಡ್ನಾಪ್ ಪ್ರಕರಣ ಕಂಡು ಬಂದಿದೆ. ಮಧ್ಯರಾತ್ರಿ ಕಿಡ್ನಾಪ್ ಆಗಿರುವ ವ್ಯಕ್ತಿ ನಾಗರಾಜ ಅಲಿಯಾಸ್ ನಾಗೇಶ್ ಅಸುಂಡಿ, ಅವರ ತಂದೆ ಬಸವರಾಜ ಅವರು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಕರಣ ದಾಖಲಾಗುವ ಮುಂಚೆ ಕಿಡ್ನಾಪ್ ಆದ ಸ್ಥಳದಲ್ಲಿ ನಮ್ಮ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಮಾಹಿತಿ ಕಲೆ ಹಾಕಿ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಸಂದೇಹದ ಮೇರೆಗೆ ಕಿಡ್ನಾಪ್ ಮಾಡಿದವರು ಎಲ್ಲಿ ಇರಬಹುದು ಎಂದು ವಿಶೇಷ ತಂಡವನ್ನು ಬೇರೆ ಬೇರೆ ಊರುಗಳಿಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಡಿಎಸ್ ಪಿ ಬೈಲಹೊಂಗಲ ನೇತೃತ್ವದಲ್ಲಿ ಮೂರು ತಂಡಗಳ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬಿಸಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ