Latest

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಟಿವಿ ನಟಿ

 

 ಗೋವಾದಲ್ಲಿ ರಕ್ಷಣೆ

ಪ್ರಗತಿ ವಾಹಿನಿ ಸುದ್ದಿ ಪಣಜಿ –

ವೇಶ್ಯಾ ವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವತಿಯರನ್ನು ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ರಕ್ಷಣೆ ಮಾಡಿದ್ದು ಇವರ ಪೈಕಿ ಓರ್ವ ಯುವತಿ ಮುಂಬೈ ಮೂಲದ ಟಿವಿ ನಟಿಯಾಗಿದ್ದಾಳೆ. ವೇಶ್ಯಾ ವಾಟಿಕೆ ನಡೆಸುತ್ತಿದ್ದ ಹೈದರಾಬಾದ್ ಮೂಲದ ಹಫೀಜ್ ಸಯ್ಯದ್ ಬಿಲಾಲ್ ಎಂಬುವವನ್ನು ಬಂಧಿಸಲಾಗಿದೆ.

ಗೋವಾದ ಪಣಜಿ ಬಳಿಯ ಸಂಗೋಲ್ಡಾ ಎಂಬ ಹಳ್ಳಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಮಾಂಸದ ದಂಧೆಯ ಅಡ್ಡೆ ನಡೆಸುತ್ತಿದ್ದ ಹಪೀಝ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ರಕ್ಷಿಸಲ್ಪಟ್ಟ ಯುವತಿಯರಲ್ಲಿ ಓರ್ವ ಯುವತಿ ಮುಂಬೈನ ವಿರಾರ್ ಮೂಲದ ಟಿವಿ ನಟಿ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಯುವತಿಯರಿಗೆ ತಲಾ ೫೦ ಸಾವಿರ ರೂ. ಕೊಡುವ ಆಮೀಷವೊಡ್ಡಿ ವೇಶ್ಯಾವಾಟಿಕೆಗೆ ಕರೆತರಲಾಗಿತ್ತು ಎಂದು ತಿಳಿಸಿದ್ದಾರೆ.

 

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: 103 ವರ್ಷದ ವೃದ್ಧ ಜೈಲುಪಾಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button