Belagavi NewsBelgaum NewsKannada NewsKarnataka NewsLatest
*ಬೆಳಗಾವಿಯಲ್ಲಿ ಉಸಿರುಗಟ್ಟಿ ಮೂವರು ಯುವಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಯಲ್ಲಿ ಹೊಗೆ ತುಂಬಿ ಉಸಿರುಗಟ್ಟಿ ನಾಲ್ವರು ಯುವಕರ ಪೈಕಿ ಮೂವರು ಮೃತಪಟ್ಟಿದ್ದು ಓರ್ವ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿರುವ ದುರ್ಘಟನೆ ಬೆಳಗಾವಿಯ ಅಮನಗರದಲ್ಲಿ ನಡೆದಿದೆ.
ರೀಹಾನ ಮತ್ತಿ ( 22 ), ಸರಫರಾಜ ಹರಪ್ಪನಹಳ್ಳಿ (22), ಮೋಯಿನ್ ನಾಲಬಂದ (23 ) ಮೃತಪಟ್ಟ ಯುವಕರು. ಶಾನವಾಜ್ (19 ) ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೆಚ್ಚಿನ ಚಳಿ ಹಿನ್ನೆಲೆ ರೂಮ್ ನಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು, ಸೋಕೊ ತಂಡ ಹಾಗೂ ಶಾಸಕ ಆಸೀಫ್ ಸೇಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




