Karnataka NewsLatest

ಬಿಜೆಪಿ ಸೇರಿದ ಅನರ್ಹ ಶಾಸಕರು: 13 ಜನರಿಗೆ ಟಿಕೆಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗುರುವಾರ ಬಿಜೆಪಿ ಸೇರಿರುವ ಎಲ್ಲ ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಮೊದಲ ಪಟ್ಟಿಯಲ್ಲಿ 13 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರ ಸೇರಿದಂತೆ ಎಲ್ಲ 13 ಕ್ಷೇತ್ರಗಳಲ್ಲೂ ಅನರ್ಹ ಶಾಸಕರು ಸ್ಪರ್ಧಿಸಲಿದ್ದಾರೆ.

ಗೋಕಾಕದಿಂದ ರಮೇಶ ಜಾರಕಿಹೊಳಿ, ಅಥಣಿಯಿಂದ ಮಹೇಶ ಕುಮಠಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ, ಹಿರೆಕೆರೂರಿನಿಂದ ಬಿ.ಸಿ.ಪಾಟೀಲ, ವಿಜಯನಗರದಿಂದ ಆನಂದ ಸಿಂಗ್, ಚಿಕ್ಕಬಳ್ಳಾಪುರದಿದ ಡಾ.ಕೆ.ಸುಧಾಕರ, ಕೆ.ಆರ್.ಪುರದಿಂದ ಭೈರತಿ ಬಸವರಾಜ, ಯಶವಂತಪುರದಿಂದ ಎಸ್.ಟಿ.ಸೋಮಶೇಖರ, ಮಹಾಲಕ್ಷ್ಮಿ ಲೇ ಔಟ್ ನಿಂದ್ ಕೆ.ಗೋಪಾಲಯ್ಯ, ಹೊಸಕೋಟೆಯಿಂದ ಎಂಟಿಬಿ ನಾಗರಾಜ, ಕೃಷ್ಣರಾಜಪೇಟೆಯಿಂದ ಕೆ.ಸಿ.ನಾರಾಯಣಗೌಡ, ಹುಣಸೂರಿನಿಂದ ಎಚ್.ವಿಶ್ವನಾಥ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.

ಶಿವಾಜಿನಗರಕ್ಕೆ ರೋಷನ್ ಬೇಗ್ ಬದಲಿಗೆ ಮಾಜಿ ಕಾರ್ಪೋರೇಟರ್ ಎಂ.ಶರವಣ ಟಿಕೆಟ್ ಪಡೆಯಲಿದ್ದಾರೆ.

Home add -Advt

Related Articles

Back to top button