Kannada NewsKarnataka NewsLatest

ಸಮಯ ಮಿತಿ ಮತ್ತು ಗುಣಮಟ್ಟ ಪ್ರಥಮ ಆದ್ಯತೆ -ಶಶಿಧರ ಕುರೇರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಸೋಮವಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಮಹಾತ್ಮಾ ಫುಲೆ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಸೋಮವಾರ ರಾತ್ರಿ ವೀಕ್ಷಿಸಿದ ಶಶಿಧರ ಕುರೇರ

ವಿವಿಧ ಕಾಮಗಾರಿಗಳ ಸ್ಥಿತಿ-ಗತಿಗಳ ಮಾಹಿತಿ ಪಡೆದ ಅವರು, ಸಮಯ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಮತ್ತು ಗುಣಮಟ್ಟ ಕಾಪಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ಅಗತ್ಯವಾದಲ್ಲಿ ಎಚ್ಚರಿಕೆಯ ಫಲಕ ಅಳವಡಿಸಬೇಕು. ಜನರಿಂದ ಯಾವುದೇ ರೀತಿಯ ಆಕ್ಷೇಪಗಳು ಬಂದಲ್ಲಿ ಸೌಹಾರ್ದಯುತವಾಗಿ ಮಾತನಾಡಿ ಮುಂದುವರಿಯಬೇಕು ಎಂದು ಕುರೇರ ತಿಳಿಸಿದರು.

ಡಿಸೆಂಬರ್ ಅಂತ್ಯದೊಳಗೆ ಪ್ರಗತಿಯಲ್ಲಿರುವ ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಬೇಕು. ಗುತ್ತಿಗೆದಾರರು ಅನಗತ್ಯವಾಗಿ ವಿಳಂಬ ಮಾಡಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದರು.

Home add -Advt

ವಿವಿಧ ಕಾಮಗಾರಿಗಳ ಉಸ್ತುವಾರಿ ಅಧಿಕಾರಿಗಳು ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಸಮಸ್ಯೆಗಳನ್ನು ಗಮನಕ್ಕೆ ತಂದು ಪರಿಹಾರದ ಕುರಿತು ಚರ್ಚಿಸಿದರು.

 

Related Articles

Back to top button