Latest

ಡೇಟಿಂಗ್ ಆಪ್ ನಲ್ಲಿ ಯುವತಿಯರೊಂದಿಗೆ ಸ್ನೇಹ; ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ; ಸುಶಾಂತ್ ಜೈನ್ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ;  ಬೆಂಗಳೂರು: ಟಿಂಡರ್ ಡೇಟಿಂಗ್ ಆಪ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಬಳಿಕ ಫೋಟೋ, ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಕೃತ ವ್ಯಕ್ತಿಯೋರ್ವನನ್ನು ಬೆಂಗಳೂರು ಹೆಚ್.ಎಸ್.ಆರ್.ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಆರೋಪಿ. ಟಿಂಡರ್ ಡೇಟಿಂಗ್ ಆಪ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ಬಳಿಕ ಅವರೊಂದಿಗೆ ಸ್ನೇಹ ಬೆಳೆಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೂ ಭೇಟಿ ನೀಡುತ್ತಿದ್ದ.

Related Articles

ಹೀಗೆ ಮನೆಗೆ ಹೋಗುತ್ತಿದ್ದ ಆರೋಪಿ, ಯುವತಿಯರೊಂದಿಗೆ ಖಾಸಗಿಯಾಗಿ ಸಮಯ ಕಳೆಯುವಂತೆ ಬಲವಂತಮಾಡಿ, ಅವರ ಬಟ್ಟೆ ಬಿಚ್ಚಿಸಿ ಫೋಟೋ, ವಿಡಿಯೋ ತೆಗೆದುಕೊಂಡು ಮನೆಯಿಂದ ಪಲಾಯನವಾಗುತ್ತಿದ್ದ. ಆ ಬಳಿಕ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡುತ್ತಿದ್ದ.

ವಿಕೃತ ವ್ಯಕ್ತಿ ಬಗ್ಗೆ ಕೋಡಿಗೆಹಳ್ಳಿ ಠಾಣೆಯಲ್ಲಿ ಯುವತಿಯೋರ್ವಳು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಹೆಚ್.ಎಸ್.ಆರ್.ಲೇಔಟ್ ನಲ್ಲಿ ಆರೋಪಿ ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ನನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button