Kannada NewsKarnataka NewsLatest

*BREAKING: ಟಿಪ್ಪರ್ ಲಾರಿ-ಬೈಕ್ ಭೀಕರ ಅಪಘಾತ: ಮೆಡಿಕಲ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ 21 ವರ್ಷದ ಕೃತ್ತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ವಿದ್ಯಾರ್ಥಿನಿ ಹಂಸಾ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಬೈಕ್ ನಲ್ಲಿ ತೆರಳುತ್ತಿದ ವೇಳೆ ಟಿಪ್ಪರ್ ಲಾರಿ ಬೈಕ್ ಗೆ ಗುದ್ದಿದೆ. ಕೆಳಗೆ ಬಿದ್ದ ಕೃತ್ತಿಕಾ ಮೇಲೆಯೇ ಲಾರಿ ಹರಿದು ಹೋಗಿದೆ. ಸ್ಥಳದಲ್ಲೇ ಕೃತ್ತಿಕಾ ಮೃತಪಟ್ಟಿದ್ದಾಳೆ. ಗಾಯಾಳು ಹಂಸಾಳನ್ನು ಆರ್.ಆರ್.ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button