
ಪ್ರಗತಿವಾಹಿನಿ ಸುದ್ದಿ: ಕುಡುಕನೊಬ್ಬ ದೇವಸ್ಥಾನದ ಕಾಂಪೌಂಡ್ ಹಾರಿ ದೇಗುಲದ ಗೋಪುರವೇರಿ ಹುಚ್ಚಾಟ ಮೆರೆದಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.
ತಿರುಪತಿಯಲ್ಲಿ ಭದ್ರತಾ ಲೋಪವಾಗಿದ್ದು, ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಕುಡುಕ ಮಹಾಶಯನೊಬ್ಬ ಕಾಂಪೌಂಡ್ ಹಾರಿ ಗೋವಿಂದರಾಜ ಸ್ವಾಮಿ ದೇವಸ್ಥಾನದ ಗೋಪುರ ಏರಿ ಆತಂಕ ಸೃಷ್ಟಿಸಿದ್ದಾನೆ.
ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಕೆಳಗಿಳಿಸಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆಯಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ದೇಗುಲದಲ್ಲಿ ಏಕಾಂತ ಸೇವೆ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾಪಡೆಗಳ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಒಳಬಂದಿದ್ದು, ಏಕಾಏಕಿ ಗೋಪುರ ಏರಿದ್ದಾನೆ. ಬಳಿಕ ಅಲ್ಲಿಂದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ದೇಗುಲದ ಸಿಬ್ಬಂದಿ ಹಾಗೂ ಭಕ್ತರು ಗಾಬರಿಯಾಗಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿ ಆತನನ್ನು ವಶಕ್ಕೆ ಪಡೆದಿದ್ದಾರೆ.



