Latest

*8 ತಿಂಗಳ ಕಾಲ ತಿರುಪತಿ ತಿಮ್ಮಪ ದೇವಸ್ಥಾನದ ಬಾಗಿಲು ಬಂದ್*

ಪ್ರಗತಿವಾಹಿನಿ ಸುದ್ದಿ; ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಾಗಿಲು 6-8 ತಿಂಗಳ ಕಾಲ ಬಂದ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನಂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ತಿರುಪತಿ ತಿಮ್ಮಪ್ಪ ದೇವಸ್ಥಾನದ ಮೇಲೆ 3 ಮಹಡಿಯ ಆನಂದ ನಿಲಯಂ ಹೆಸರಿನ 37.8 ಅಡಿ ಎತ್ತರದ ಗೋಪುರವಿದೆ. ಇದಕ್ಕೆ ಚಿನ್ನದ ಲೇಪನ ಮಾಡುವ ಕಾರಣ ಶ್ರೀವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಭಕ್ತರಿಗೆ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ದೇವಾಲಯದ ಬಳಿ ವೆಂಕಟೇಶ್ವರ ಸ್ವಾಮಿಯ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ದೇವಸ್ಥಾನದ ಗೋಪುರದ ಚಿನ್ನದ ಲೇಪನ ಕಾರ್ಯ ಪ್ರೆಬ್ರವರಿಯಿಮ್ದ ಆರಂಭವಾಗಲಿದ್ದು, ಕೆಲಸ ಮುಗಿಯಲು 6 ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಚಿನ್ನದ ಲೇಪನ ಕಾರ್ಯ ಮುಗಿಯುವವರೆಗೆ ತಾತ್ಕಾಲಿಕವಾಗಿ ಮುಖ್ಯ ದೇಗುಲದ ಪಕ್ಕದಲ್ಲಿಯೇ ಬಾಲಾಲಯಂ ಎನ್ನುವ ತಾತ್ಕಾಲಿಕ ಮಂದಿರ ನಿರ್ಮಿಸಿ ಅದರಲ್ಲಿ ತಿಮ್ಮಪ್ಪನ ವಿಗ್ರಹದ ಪ್ರತಿಕೃತಿ ಇಡಲಾಗುತ್ತದೆ. ಈ ಮೂಲಕ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ಮಾಡಿಕೊಡಲು ಯೋಜನೆ ರೂಪಿಸಲಾಗಿದೆ.

*ಮತ್ತೆ ನಾಲ್ವರು ಪ್ರಯಾಣಿಕರಲ್ಲಿ ಕೊರೊನಾ ದೃಢ; ಸೋಂಕಿತ ಪ್ರಯಾಣಿಕರ ಸಂಖ್ಯೆ 16ಕ್ಕೆ ಏರಿಕೆ*

Home add -Advt

https://pragati.taskdun.com/bangalore16-covid-positivebf-7-virus/

Related Articles

Back to top button