ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ಈ ನಡುವೆ ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಜ್ವರ, ಕೆಮ್ಮು, ನೆಗಡಿ ಇದ್ದರೆ ದೇವಾಲಯಕ್ಕೆ ಬರಬೇಡಿ ಎಂದು ಭಕ್ತರಿಗೆ ಮನವಿ ಮಾಡಿಕೊಂಡಿದೆ.
ಈಗಾಗಲೇ ಮುಂಜಾಗ್ರತಾ ಕ್ರಮವನ್ನು ಕೂಡ ಕೈಗೊಂಡಿರುವ ಟಿಟಿಡಿ, ಭಕ್ತರ ವೈದ್ಯಕೀಯ ತಪಾಸಣೆ ಮಾಡಿಸಿ ದೇವಾಲಯಕ್ಕೆ ಬಿಡುವಂತಹ ಕೆಲಸ ಮಾಡುತ್ತಿದೆ. ತಪಾಸಣೆಯ ವೇಳೆ ಶಿತ, ಕಫ ಹಾಗೂ ಜ್ವರ ಕಂಡುಬಂದಲ್ಲಿ ಭಕ್ತರ ದೇವಾಲಯ ಪ್ರವೇಶವನ್ನು ರದ್ದು ಮಾಡುತ್ತಿದ್ದು, ಇನ್ನೊಂದು ದಿನ ದೇವಸ್ಥಾನಕ್ಕೆ ಬರುವಂತೆ ಹೇಳಿ ವಾಪಸ್ ಕಳುಹಿಸಲಾಗುತ್ತಿದೆ.
ಕೊರೊನಾ ಭೀತಿ ಬೆನ್ನಲ್ಲೇ ತಿರುಪತಿ-ತಿರುಮಲಕ್ಕೆ ಬರುವ ಭಕ್ತರ ಮೇಲೆ ಆಡಳಿತ ಮಂಡಳಿ ತೀವ್ರ ನಿಗಾ ವಹಿಸಿದೆ. ದೇವಾಲಯಕ್ಕೆ ಪ್ರವೇಶ ಮಾಡುವ ಪ್ರತಿಯೊಬ್ಬರು ಮಾಸ್ಕ್ ಧರಿಸಿ ದೇವಾಲಯಕ್ಕೆ ಬರುವಂತೆ ಸೂಚಿಸಿದೆ. ಪ್ರತಿದಿನ ತಿರುಪತಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ