Belagavi NewsBelgaum NewsKannada NewsKarnataka NewsLatest
*ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಗಮನಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾನಗರ ಪಾಲಿಕೆ ಮತ್ತು ನಗರ ಸ್ಥಳಿಯ ಸಂಸ್ಥೆಗಳಲ್ಲಿ ಇ-ಆಸ್ಥಿ ತಂತ್ರಾಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ವಾರ್ಡ್ ನಂಬರ್ ೧ ರಿಂದ ೨೦ ರವರೆಗೆ ಗೋವಾವೇಸ್ ಕಾಂಪ್ಲೆಕ್ಸ್, ದಕ್ಷಿಣ ವಲಯ ಕಚೇರಿ (೭೪೮೩೧೧೨೮೨೯), ೨೧ ರಿಂದ ೩೯ ರವರೆಗೆ ಕೋನವಾಳ ಗಲ್ಲಿ ಕೇಂದ್ರ ವಲಯ ಕಚೇರಿ (೭೯೯೬೭೪೨೧೩೨) ಮತ್ತು ೪೦ ರಿಂದ ೫೮ ರವರೆಗೆ ಅನೆಕ್ಸ್ ಬಿಲ್ಡಿಂಗ್, ಮುಖ್ಯ ಕಚೇರಿ ಮಹಾನಗರ ಪಾಲಿಕೆ ಬೆಳಗಾವಿ ಇಲ್ಲಿ ಸಹಾಯವಾಣಿ ಕೇಂದ್ರಗಳಲ್ಲಿ ಇ-ಆಸ್ತಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಖುದ್ದಾಗಿ ವೆಬ್ ಸೈಟ್: http://easthi.kar.gov.in ಗೆ ಭೇಟಿ ನೀಡಿ ತಮ್ಮ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.