Kannada NewsLatest

ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು

ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಿಯಾಯತಿ ದರದಲ್ಲಿ ರೈತರಿಗೆ ಸಸಿಗಳ ವಿತರಣೆ

ತೋಟಗಾರಿಕೆ ಇಲಾಖೆ, ಬೆಳಗಾವಿ ವತಿಯಿಂದ ಬೆಳಗಾವಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಕಸಿ, ಸಸಿಗಳನ್ನು ಅಭಿವೃದ್ಧಿ ಪಡಿಸಿ ರಿಯಾಯತಿ ದರದಲ್ಲಿ ರೈತರಿಗೆ ಸಾರ್ವಜನಿಕರಿಗೆ ಒದಗಿಸಲಾಗುವುದು. ಅವಶ್ಯಕತೆಗೆ ಅನುಸಾರವಾಗಿ ಕಸಿ, ಸಸಿಗಳನ್ನು ತಮ್ಮ ಹತ್ತಿರದ ಕ್ಷೇತ್ರಗಳಿಂದ ಪಡೆದುಕೊಳ್ಳಬಹುದು.

ಕ್ಷೇತ್ರಗಳು :

ಸವದತ್ತಿ ತಾಲ್ಲೂಕಿನ ಕುರವಿನಕೊಪ್ಪ ತೋ. ಕ್ಷೇತ್ರದಲ್ಲಿ ಮಾವು 6200 ಸಂ, ಅಲಂಕಾರಿಕ 996 ಸಂ, ಸವದತ್ತಿ ತಾಲ್ಲೂಕಿನ ಉಗರಗೋಳ ತೋ. ಕ್ಷೇತ್ರದಲ್ಲಿ ಮಾವು 10324 ಸಂ, ಸಪೋಟಾ 610 ಸಂ, ನೆರಳೆ 1968 ಸಂ, ನಿಂಬೆ 9066 ಸಂ, ಕರಿಬೇವು 9168 ಸಂ, ಸವದತ್ತಿ ತಾಲ್ಲೂಕಿನ ಯಕ್ಕೇರಿ ತೋ. ಕ್ಷೇತ್ರದಲ್ಲಿ ಮಾವು 6239 ಸಂ, ನಿಂಬೆ 1474 ಸಂ, ಕರಿಬೇವು 2044 ಸಂ.

ಹುಕ್ಕೇರಿ ತಾಲ್ಲೂಕಿನ ಪುಷ್ಪಾಭಿವೃದ್ಧಿ ಭಾಗ 2 ರಲ್ಲಿ ಮಾವು 30217 ಸಂ, ಸೀಬೆ 6806 ಸಂ, ನೆರಳೆ 3523 ಸಂ, ನಿಂಬೆ 4770 ಸಂ, ತೆಂಗು 438 ಸಂ, ಕರಿಬೇವು 4700 ಸಂ, ತೆಂಗು 1673 ಸಂ, ನುಗ್ಗೆ 940 ಸಂ, ಹುಕ್ಕೇರಿ ತಾಲ್ಲೂಕಿನ ಹಿಡಕಲ್ ತೋ. ಕ್ಷೇತ್ರದಲ್ಲಿ ಮಾವು 30 ಸಂ, ಸೀಬೆ 100 ಸಂ, ನೆರಳೆ 125 ಸಂ, ನಿಂಬೆ 81 ಸಂ, ಹುಣಸೆ 85 ಸಂ, ಗೋಡಂಬಿ 200 ಸಂ, ಹಲಸು 180 ಸಂ, ಅಲಂಕಾರಿಕ 475 ಸಂ, ಹುಕ್ಕೇರಿ ತಾಲ್ಲೂಕಿನ ಪುಷ್ಪಾಭಿವೃದ್ಧಿ ಭಾಗ 1 ರಲ್ಲಿ ಅಲಂಕಾರಿಕ 14689 ಸಂ.

ಖಾನಾಪೂರ ತಾಲ್ಲೂಕಿನ ಶೇಡಗಳ್ಳಿ ತೋ. ಕ್ಷೇತ್ರದಲ್ಲಿ ಮಾವು 11013 ಸಂ, ಸಪೋಟಾ 498 ಸಂ, ನಿಂಬೆ 6708 ಸಂ, ಕರಿಬೇವು 6409 ಸಂ.

ಕಿತ್ತೂರ ತಾಲ್ಲೂಕಿನ ಕಿತ್ತೂರ ತೋ. ಕ್ಷೇತ್ರದಲ್ಲಿ ಮಾವು 824 ಸಂ, ಸಪೋಟಾ 12160 ಸಂ, ಸೀಬೆ 2218 ಸಂ, ನಿಂಬೆ 6492 ಸಂ, ಸೀತಾಫಲ 6904 ಸಂ, ಕರಿಬೇವು 5275 ಸಂ, ಅಲಂಕಾರಿಕ 3784 ಸಂ.

ಗೋಕಾಕ ತಾಲ್ಲೂಕಿನ ಧೂಪಧಾಳ ತೋ. ಕ್ಷೇತ್ರದಲ್ಲಿ ಮಾವು 13756 ಸಂ, ಸಪೋಟಾ 17146 ಸಂ, ಸೀಬೆ 15010 ಸಂ, ನೆರಳೆ 18299 ಸಂ, ನಿಂಬೆ 10124 ಸಂ, ತೆಂಗು 5810 ಸಂ, ಗೋಡಂಬಿ 5000 ಸಂ, ಅಲಂಕಾರಿಕ 102.

ರಾಮದುರ್ಗ ತಾಲ್ಲೂಕಿನ ರಾಮದುರ್ಗ ಕಛೇರಿ ಸಸ್ಯಾಗಾರ ತೆಂಗು 823 ಸಂ, ಕರಿಬೇವು 3980 ಸಂ.

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಮಾವು: 78603 ಸಂ, ಸಪೋಟಾ 30414 ಸಂ, ಸೀಬೆ 24135 ಸಂ, ನೆರಳೆ 23915 ಸಂ, ನಿಂಬೆ 38715 ಸಂ, ತೆಂಗು 7121, ಸೀತಾಫಲ 6904 ಸಂ, ಹುಣಸೆ 85 ಸಂ, ಗೋಡಂಬಿ 5200 ಸಂ, ಕರಿಬೇವು 31566 ಸಂ, ತೆಂಗು (ಖಿxಆ) 1673, ನುಗ್ಗೆ 940 ಸಂ, ಹಲಸು 180 ಸಂ ಹಾಗೂ ಅಲಂಕಾರಿಕ 20066 ಸಂಖ್ಯೆಯ ಕಸಿ, ಸಸಿಗಳು ಮಾರಾಟಕ್ಕೆ ಲಭ್ಯವಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 0831-2451422 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಚನ್ನಮ್ಮ ವೃತ್ತ, ಬೆಳಗಾವಿ ಅವರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ

2019-20ನೇ ಸಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಪ್ರತಿ ಭಾನುವಾರ ಹಾಗೂ ಇತರೆ ಸಾರ್ವತ್ರಿಕ ರಜೆ ದಿನಗಳಂದು ಜುಲೈ 14 ರಿಂದ ಅಗಷ್ಟ 25 ರ ವರೆಗೆ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಸಲು ಪ್ಯಾಕೇಜ್ ರೀತಿಯಲ್ಲಿ ವೇಗದೂತ ಸಾರಿಗೆ ಮೂಲಕ ಪ್ರವಾಸದ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ಯಾಕೇಜ್-1 : ಬೆಳಗಾವಿಯಿಂದ ಹಿಡಕಲ್ ಡ್ಯಾಂ -ಗೋಡಚಿ ಮಲ್ಕಿ- ಗೋಕಾಕ ಪಾಲ್ಸ್ ಮಾರ್ಗ : ಪ್ರಯಾಣಿಕರಿಗೆ ಹೋಗಿ ಬರುವ ಎರಡು ಸೇರಿ ರೂ. 160 ದರ ಇರುತ್ತದೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಟು 10 ಗಂಟೆಗೆ ಹಿಡಕಲ್ ಡ್ಯಾಂ ತಲಪುವುದು ನಂತರ 1 ಗಂಟೆಯವರೆಗೆ ಸ್ಥಳ ವೀಕ್ಷಣೆ ಅವಕಾಶ ನೀಡಲಾಗುವದು.

11 ಗಂಟೆಗೆ ಹಿಡಕಲ್ ಡ್ಯಾಂ ನಿಂದ ನಿರ್ಗಮಿಸಿ 11: 30 ಕ್ಕೆ ಗೋಡಚಿ ಮಲ್ಕಿ ತಲಪುವುದು 1 ಗಂಟೆ 30 ನಿಮಿಷದ ವರೆಗೆ ಸ್ಥಳ ವೀಕ್ಷಣೆಗೆ ಅವಕಾಶ ನಂತರ ಮಧ್ಯಾನ್ಹ 1 ಗಂಟೆಗೆ ಗೋಡಚಿ ಮಲ್ಕಿಯಿಂದ ನಿರ್ಗಮಿಸಿ 1.30 ಕ್ಕೆ ಗೋಕಾಕ ಪಾಲ್ಸ್ ತಲಪುವುದು 2 ಗಂಟೆ 30 ನಿಮಿಷ ಸ್ಥಳ ವಿಕ್ಷಣೆಗೆ ಅವಕಾಶವಿರುವದು ನಂತರ 4 ಗಂಟೆಗೆ ಗೋಕಾಕ ಪಾಲ್ಸ್ ನಿಂದ ನಿರ್ಗಮಿಸಿ ಸಾಯಂಕಾಲ 6 ಗಂಟೆಗೆ ಬೆಳಗಾವಿಗೆ ತಲಪುವುದು.

ಪ್ಯಾಕೇಜ್-2 : ಬೆಳಗಾವಿಯಿಂದ ನಾಗರ ತಾಸ ಜಲಧಾರೆ – ಹಿರಣ್ಯಕೇಶಿ ನದಿಯ ಉಗಮಸ್ಥಾನ- ಅಂಬೋಲಿ ಮಾರ್ಗ : ಪ್ರಯಾಣಿಕರಿಗೆ ಪ್ರಯಾಣಿಕರಿಗೆ ಹೋಗಿ ಬರುವ ಎರಡು ಸೇರಿ ರೂ. 260 ದರ ಇರುತ್ತದೆ.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 9 ಗಂಟೆಗೆ ಹೊರಟು 11 ಗಂಟೆಗೆ ನಾಗರ ತಾಸ ಜಲಧಾರೆ ತಲುಪಿ 1 ಗಂಟೆಯ ಕಾಲ ಸ್ಥಳ ವೀಕ್ಷಣೆ ಮಾಡಬಹುದು. ನಂತರ ಮಧ್ಯಾನ್ಹ 12 ಗಂಟೆಗೆ ನಾಗರ ತಾಸ ಜಲಧಾರೆಯಿಂದ ನಿರ್ಗಮಿಸಿ 12.30 ಕ್ಕೆ ಅಂಬೋಲಿ ಜಲಧಾರೆಯನ್ನು ತಲಪುವುದು 3 ಗಂಟೆ 30 ನಿಮಿಷದ ವರೆಗೆ ಅಂಬೋಲಿ ಜಲಧಾರೆಯನ್ನು ವಿಕ್ಷಣೆಗೆ ಮಾಡಲು ಅವಕಾಶವಿರುವದು ನಂತರ 4 ಗಂಟೆಗೆ ಅಂಬೋಲಿ ಜಲಧಾರೆಯಿಂದ ನಿರ್ಗಮಿಸಿ ಸಾಯಂಕಾಲ 6 ಗಂಟೆಗೆ ಬೆಳಗಾವಿಗೆ ತಲಪುವುದು.

ಸದರಿ ಸಾರಿಗೆಗಳಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ 7760991612, 7760991613 ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-1 ಮೊ.ಸಂ 7760991625 ರವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಯಿಂದ ಜೋಗ ಜಲಪಾತ: ವಿಶೇಷ ಸಾರಿಗೆ ಸೌಲಭ್ಯ

2019-20ನೇ ಸಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಜಲಧಾರೆಗಳ ವೀಕ್ಷಣೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಪ್ರತಿ ಭಾನುವಾರ ಹಾಗೂ ಇತರೇ ಸಾರ್ವತ್ರಿಕ ರಜೆ ದಿನಗಳಂದು ಜುಲೈ 27 ರಿಂದ ಅಗಸ್ಟ್ 25 ರ ವರೆಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಸಲು (Package  Tour)ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗಾವಿಯಿಂದ ಹುಬ್ಬಳ್ಳಿ -ಜೋಗಜಲಪಾತ ಮಾರ್ಗ : ಪ್ರಯಾಣಿಕರಿಗೆ ಹೋಗಿ ಬರುವ ಎರಡು ಸೇರಿ ರೂ. 500 ದರ ಇರುತ್ತದೆ. ಸದರಿ ಪ್ಯಾಕೇಜ ಟೂರ್ ಸಾರಿಗೆಗೆ ಕನಿಷ್ಟ 25 ಜನ ಪ್ರಯಾಣಿಕರಿದ್ದಲ್ಲಿ ವಾಹನ ಕಾರ್ಯಾಚರಣೆ ಮಾಡಲಾಗುವುದು.

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 12.30 ಗಂಟೆಗೆ ಜೋಗಜಲಪಾತ ತಲಪುವುದು ನಂತರ 3 ಗಂಟೆ 30 ನಿಮಿಷ ಸ್ಥಳ ವೀಕ್ಷಣೆ ಅವಕಾಶ ನೀಡಲಾಗುವದು. ಸಾಯಂಕಾಲ 4 ಗಂಟೆಗೆ ಜೋಗಜಲಪಾತದಿಂದ ನಿರ್ಗಮಿಸಿ ರಾತ್ರಿ 9 ಗಂಟೆಗೆ ಬೆಳಗಾವಿಗೆ ತಲಪುವುದು.

ಸದರಿ ಸಾರಿಗೆಗಳಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂಗಡ ಟಿಕೇಟ ಕಾಯ್ದಿರಿಸುವ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಲ್ದಾಣ ಮೇಲ್ವಿಚಾರಕರು ಕೇ.ಬ.ನಿ ಬೆಳಗಾವಿ ಮೋ.ಸಂ 7760991612/7760991613 ಹಾಗೂ ಘಟಕ ವ್ಯವಸ್ಥಾಪಕರು ಬೆಳಗಾವಿ-1 ಮೊ.ಸಂ 7760991625, ಬೆಳಗಾವಿ-3, 7760991627 ಅವರನ್ನು ಸಂಪರ್ಕಿಸುವುದು ಎಂದು ಬೆಳಗಾವಿ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೋಟೊಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯಲ್ಲಿ ಬರುವ ಆಗಸ್ಟ್ 1 ರಂದು ಫೋಟೊಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಯು 30 ದಿನಗಳ ಕಾಲ ಊಟ, ವಸತಿ ಸಹಿತ ಉಚಿತವಾಗಿ ನೀಡಲಾಗಿದೆ. ಆಸಕ್ತಿ ಇರುವ 18 ರಿಂದ 45 ವರ್ಷದ ಯುವಕ ಮತ್ತು ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ (ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉ.ಕ) ಈ ವಿಳಾಸಕ್ಕೆ ಕೂಡಲೇ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 9483485489, 9482188780 ನ್ನು ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಸೆ ಪ್ರಮಾಣ ಪತ್ರಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಏಕೀಕರಣ ನಿರ್ವಹಣೆ ವ್ಯವಸ್ಥೆ ಪ್ರಗತಿ-10 ಯೋಜನೆಯಡಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಲಸೆ ಪ್ರಮಾಣ ಪತ್ರವನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ವಲಸೆ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಹಾಗೂ ಸದರಿ ಪ್ರಮಾಣ ಪತ್ರದ ನೈಜತೆಯನ್ನು ಸಹ ಆನ್‌ಲೈನ್ ಮೂಲಕವೇ ಪರಿಶೀಲಿಸಿಕೊಳ್ಳುವ ವ್ಯವಸ್ಥೆನ್ನು ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್ http/www.kseeb.kar.nic.in ಕ್ಕೆ ಸಂಪರ್ಕಿಸಬಹುದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 26 ರಂದು ಡೆಂಗಿ ವಿರೋಧಿ ಮಾಸಾಚರಣೆ

ಜುಲೈ 17 ರಂದು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದ ಆದೇಶದ ಮೇರೆಗೆ ಡೆಂಗಿ ವಿರೋಧಿ ಮಾಸಾಚರಣೆ 2019 ಅಂಗವಾಗಿ ಜುಲೈ 26 ರಂದು ಬೆಳಗ್ಗೆ 9:30 ಕ್ಕೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮುರಿಯಲ್ಲಿ ಡೆಂಗಿ ಜಾಗೃತಿ ಜಾತಾ ಕಾರ್ಯಕ್ರಮವನ್ನು ಏರ್ಪಡಿಸಿದರಿಂದ ಜಾತಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಬೇಕೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಕಲಚೇತನರ ಗಮನಕ್ಕೆ

ಬೆಳಗಾವಿ ತಾಲೂಕಿನ ಮಾಸಾಶನ ಪಡೆಯುತ್ತಿರುವ ಎಲ್ಲಾ ವಿಕಲಚೇತನರು ಈಗಾಗಲೇ ಹೊಂದಿರುವ ಹಳೇ ಗುರುತಿನ ಚೀಟಿಯೊಂದಿಗೆ ಅಥವಾ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಹೊಸ UDID SMART CARD ಪಡೆದುಕೊಳ್ಳಲು ಇಂದೇ ಇದಕ್ಕೆ ಸಂಬಂಧಪಟ್ಟ ವೆಬ್‌ಸೈಟ್ www.awavalambancard.gov.in  ನಲ್ಲಿ ದಾಖಲೆಗಳೊಂದಿಗೆ ಅನ್‌ಲೈನ್ ಮೂಲಕ ನೊಂದಣಿ ಮಾಡಿಸಿ UDID ಕಾರ್ಡ ಪಡೆದುಕೊಳ್ಳಬಹುದು ಎಂದು ಬೆಳಗಾವಿ ತಹಶೀಲ್ದಾರರಾದ ಮಂಜುಳಾ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಅಹವಾಲು ಸ್ವೀಕಾರ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಬೆಳಗಾವಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವ್ಯಥಾ ತೊಂದರೆ ಕೊಡುವುದು ಅಥವಾ ಲಂಚ ಕೇಳುವುದು ಇತ್ಯಾದಿ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದವರು ಅಗಸ್ಟ್ 13 ರ ಒಳಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ಸಹಿ ಮಾಡಿದ ದೂರು ಅರ್ಜಿಗಳನ್ನು ಹಾಗೂ ನಿಗದಿತ ನಮೂನೆಯ ಫಾರ್ಮ ನಂ.1 & 2 ಗಳನ್ನು ಭರ್ತಿ ಮಾಡಿ ನೋಟರಿಯಿಂದ ಅಫಿಡೆವಿಟ್ ಮಾಡಿಸಿದ ಅರ್ಜಿಗಳನ್ನು ಸಲ್ಲಿಸಬಹುದು.

ಅನಾಮಧೇಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಕೊಡಬೇಕಾದ ಅಂತಿಮ ದಿನಾಂಕದಿಂದ ಸುಮಾರು 10 ರಿಂದ 20 ದಿನಗಳಾದ ಮೇಲೆ ಒಂದು ನಿಗದಿತ ದಿನಾಂಕದಂದು ಅರ್ಜಿ ಕೊಟ್ಟಿರುವವರೆಲ್ಲರೂ ತಮ್ಮ ಅರ್ಜಿಯಲ್ಲಿನ ಅಹವಾಲುಗಳನ್ನು ಗೌರವಾನ್ವಿತ ಲೋಕಾಯುಕ್ತರ ಮುಂದೆ ಹೇಳಿಕೊಳ್ಳಬಹುದು. ಆ ನಿಗದಿತ ದಿನಾಂಕವನ್ನು ಮುಂದೆ ತಿಳಿಸಲಾಗುವುದು. ಆ ದಿನಾಂಕದಂದು ಜಿಲ್ಲೆಯ ಕೇಂದ್ರದಲ್ಲಿ ಒಂದು ನಿಗದಿತ ಸ್ಥಳದಲ್ಲಿ ಗೌರವಾನ್ವಿತ ಲೋಕಾಯುಕ್ತರವರೇ ಖುದ್ದು ಅಹವಾಲು ಸ್ವೀಕರಿಸುವರು.

ಜನತೆಯ ಕುಂದು ಕೊರತೆಗಳನ್ನು ನಿವಾರಿಸುವುದೇ ಈ ಸಭೆಯ ಉದ್ದೇಶವಾದುದರಿಂದ ದುರುದ್ದೇಶದಿಂದ ಕೂಡಿದ ದೂರುಗಳನ್ನಾಗಲೀ ಅಥವಾ ವ್ಯರ್ಥ ವಾಗ್ವಾದಗಳನ್ನಾಗಲೀ ಮಾನ್ಯ ಮಾಡುವುದಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರುವುದು ಲೋಕಾಯುಕ್ತ ಸಂಸ್ಥೆಯ ಮುಖ್ಯ ಗುರಿಯಾಗಿರುವುದರಿಂದ ಈ ವಿಷಯದಲ್ಲಿ ಸಾರ್ವಜನಿಕ ಬಾಂಧವರು ಸಹಕರಿಸಬೇಕಾಗಿ ಎಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿ ಸಲ್ಲಿಸಿ: ಡಾ. ರಾಜೇಂದ್ರ ಕೆ.ವಿ

2011ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿಯ ಪ್ರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 87898 ಫಲಾನುಭವಿಗಳ ಸಮೀಕ್ಷೆ ಮಾಡಿ, 38906 ಫಲಾನುಭವಿಗಳನ್ನು ಅರ್ಹ ಎಂದು ಪರಿಗಣಿಸಿದ್ದು, ಅದರ ಪೈಕಿ ಈಗಾಗಲೇ 17665 ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ಮನೆ ಮಂಜೂರಾತಿ ಮಾಡಲಾಗಿದೆ.

ಉಳಿದ 21241 ಫಲಾನುಭವಿಗಳಿಗೆ 2019-20ನೇ ಸಾಲಿನಡಿ ಜಿಲ್ಲೆಗೆ 12284 ಗುರಿ ನಿಗದಿ ಪಡಿಸಿರುತ್ತಾರೆ. ಸದರಿ ಗುರಿಯಡಿ 2011ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ಪಟ್ಟಿಯಲ್ಲಿ ಇರುವಂತಹ ಎಲ್ಲ ಫಲಾನುಭವಿಗಳು ಇಂದೇ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳಾದ ಆಧಾರ ಕಾರ್ಡ, ರೇಶನ ಕಾರ್ಡನ್ನು ತುರ್ತಾಗಿ ಸಲ್ಲಿಸಿ ವಸತಿ ಯೋಜನೆಯ ಪ್ರಯೋಜನವನ್ನು ಪಡೆಯುವುದು.

ಅದರಂತೆ 2018ರ ಸಮೀಕ್ಷೆಯಡಿ ಸೇರ್ಪಡೆಯಾದಂತಹ 205944 ವಸತಿ ರಹಿತ ಮತ್ತು 18298 ನಿವೇಶನ ರಹಿತ ಒಟ್ಟು 224242 ಫಲಾನುಭವಿಗಳು ಕಡ್ಡ್ಡಾಯವಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ನಿಖರವಾದ 20 ಅಂಶಗಳ ಹೆಚ್ಚುವರಿ ಮಾಹಿತಿಯನ್ನು ಭರ್ತಿ ಮಾಡಿ ಗ್ರಾಮ ಪಂಚಾಯತಿಗೆ ಸಲ್ಲಿಸುವುದು.

ಈ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಫಲಾನುಭವಿಗಳಿಂದ ಅಗತ್ಯ ದಾಖಲಾತಿಗಳನ್ನು ಪಡೆದು ಕೂಡಲೇ ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸುವಂತೆ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಾ. ರಾಜೇಂದ್ರ ಕೆ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಾಗರಿಕರಿಂದ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

2019ನೇ ಸಾಲಿನ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಹಿರಿಯ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ, ಕ್ರೀಡೆ, ಸಮಾಜ ಸೇವೆ ಹಾಗೂ ಸಂಸ್ಥೆ) ಗಣನೀಯ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ (60 ವರ್ಷ ಮೇಲ್ಪಟ್ಟ) ಹಿರಿಯ ನಾಗರಿಕರು ನಿಗಧಿತ ಅರ್ಜಿ ನಮೂನೆಯಲ್ಲಿ ಪೂರ್ಣ ವಿವರಗಳನ್ನೊಳಗೊಂಡ ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಅಗಸ್ಟ್ 9 ರ ಒಳಗಾಗಿ ಈ ಕಚೇರಿಗೆ ಸಲ್ಲಿಸಬೇಕು.

ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 0831-2476096 ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 26 ರಂದು ವಿದ್ಯುತ್ ನಿಲುಗಡೆ

\ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ 33/11 ಕೆವಿ ಫೋರ್ಟ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ-2 ಪೋರ್ಟರೋಡ ಪೂರಕದ ಮೇಲೆ ಬರುವ ಪೋರ್ಟಏರಿಯಾ, ಫುಲಭಾಗಗಲ್ಲಿ, ತಶೀಲ್ದಾರ ಗಲ್ಲಿ, ಮಠಗಲ್ಲಿ, ಬಾಜಿ ಮಾರ್ಕೇಟ್ ಏರಿಯಾ, ಕಲಮಠ ರೋಡ, ರವಿವಾರ ಪೇಟ, ಕಾಮತಗಲ್ಲಿ, ಶನಿ ಮಂದಿರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜುಲೈ 26 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 06 ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 28 ರಂದು ವಿದ್ಯುತ್ ನಿಲುಗಡೆ

ಯು ಜಿ ಕೇಬಲ್ ಕೆಲಸ ಕೈಗೊಳ್ಳುತ್ತಿರುವುದರಿಂದ 110 ಕೆವಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ-7 ಹೂಸುರ ಪೂರಕದ ಮೇಲೆ ಬರುವ ಸಮರ್ಥ ನಗರ, ಓಂ ನಗರ, ಟಿಚರ್ಸ ಕಾಲೋನಿ, ಮಹಾದ್ವಾರರೋಡ, ಕಪಲೇಶ್ವರ ಕಾಲೂನಿ, ಹಳೆ ಪಿಬಿ ರಸ್ತೆ, ಉಪ್ಪಾರಗಲ್ಲಿ, ಸಂಬಾಜೀರೋಡ, ಪ್ರದೇಶ, ಕಾಂತಿಕಾಂತಿಕಾಲೋನಿ ಹಳೆ ಬೆಳಗಾವಿ ಪೂರಕದ ಮೇಲೆ ಬರುವ ಪ್ರದೇಶಗಳಲ್ಲಿ ಜುಲೈ 28 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 06 ಗಂಟೆಯ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button