ಬೆಳಗಾವಿ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು
ಗಣೇಶ ಹಬ್ಬ: ಮದ್ಯ ಮಾರಾಟ ನಿಷೇಧ
ಗಣೇಶ ಹಬ್ಬದ ನಿಮಿತ್ತ ಬೆಳಗಾವಿ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೆಪ್ಟೆಂಬರ ೨ರ ಬೆಳಿಗ್ಗೆ ೬ ಗಂಟೆಯಿಂದ ಸೆಪ್ಟೆಂಬರ ೩ರ ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯದ ಅಂಗಡಿಗಳಲ್ಲಿ, ವೈನಶಾಪ್, ಬಾರ್‌ಗಳಲ್ಲಿ, ಕ್ಲಬ್‌ಗಳಲ್ಲಿ ಮತ್ತು ಹೊಟೇಲ್‌ಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯ ಸಾಗಣಿಕೆಯನ್ನು ನಿಷೇಧಿಸಿ ಎಂದು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರುಗಳಾದ ಬಿ. ಎಸ್. ಲೋಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ತಾಲೂಕ ಭೇಟಿ
ಬೆಳಗಾವಿಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಅಧಿಕಾರಿಗಳು ಅಗಸ್ಟ್ ೨೭ ರಿಂದ ೩೧ ರವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಹಾಗೂ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಅಗಸ್ಟ್ ೨೭ ರಂದು ಬೆಳಿಗ್ಗೆ ೧೧ ಗಂಟೆಗೆ ಬೈಲಹೊಂಗಲ ಪ್ರವಾಸಿ ಮಂದಿರ, ಮಧ್ಯಾಹ್ನ ೩ ಗಂಟೆಗೆ ಕಿತ್ತೂರ ಪ್ರವಾಸಿ ಮಂದಿರ(ಡೊಂಬರಕೊಪ್ಪ) ದಲ್ಲಿ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಅಗಸ್ಟ್ ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಮೂಡಲಗಿ ಪುರಸಭೆ ಹಾಗೂ ಮಧ್ಯಾಹ್ನ ೩ ಗಂಟೆಗೆ ಹಾರೊಗೇರಿ ಪುರಸಭೆಯಲ್ಲಿ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಅಗಸ್ಟ್ ೩೦ ರಂದು ಬೆಳಿಗ್ಗೆ ೧೧ ಗಂಟೆಗೆ ರಾಮದುರ್ಗ ಪ್ರವಾಸಿ ಮಂದಿರ ಹಾಗೂ ಮಧ್ಯಾಹ್ನ ೧ ಗಂಟೆಗೆ ಅಥಣಿ ಪ್ರವಾಸಿ ಮಂದಿರ ಹಾಗೂ ಮಧ್ಯಾಹ್ನ ೩ ಗಂಟೆಗೆ ಯರಗಟ್ಟಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಅಗಸ್ಟ್ ೩೧ ರಂದು ಬೆಳಿಗ್ಗೆ ೧೧ ಗಂಟೆಗೆ ಖಾನಾಪೂರ ಪ್ರವಾಸಿ ಮಂದಿರ ಹಾಗೂ ಮಧ್ಯಾಹ್ನ ೧ ಗಂಟೆಗೆ ಹುಕ್ಕೇರಿ ಪ್ರವಾಸಿ ಮಂದಿರ ಹಾಗೂ ಮಧ್ಯಾಹ್ನ ೪ ಗಂಟೆಗೆ ಸದಲಗಾ ಪುರಸಭೆಯಲ್ಲಿ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಕ ಕಾಣೆ
ಸುಮೀತ್ ಕೇಶವ್ ಜಾಂಗಳೆ ಎಂಬ ಬಾಲಕ ಅನಗೋಳದ ಬಾಳೆಕುಂದ್ರಿ ಚಾಳ ಕೊರವಿ ಗಲ್ಲಿಯಲ್ಲಿರುವ ತಮ್ಮ ಮನೆಯಿಂದ ಅಗಸ್ಟ್ ೧೯ ರಂದು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವನು ಇದುವರೆಗೂ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮೀತ್ ಕೇಶವ್ ಜಾಂಗಳೆ ವಯಸ್ಸು ೧೪ ವರ್ಷ, ಗೋದಿ ಕೆಂಪು ಮೈಬಣ್ಣ, ೪.೦ ಎತ್ತರ, ಉದ್ದು ಮುಖ, ಎತ್ತರವಾದ ಹಣೆ ಹೊಂದಿದ್ದಾನೆ ಹಾಗೂ ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾನೆ ಈ ಪ್ರಕಾರ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಟಿಳಕವಾಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೬, ಪೊಲೀಸ್ ಇನ್ಸಪೆಕ್ಟರ್ ದೂರವಾಣಿ ಸಂಖ್ಯೆ ೯೪೮೦೮೦೪೦೫೨, ಪಿಎಸ್‌ಐ ಟಿಳಕವಾಡಿ ದೂರವಾಣಿ ಸಂಖ್ಯೆ ೯೪೮೦೮೦೪೧೧೨, ಪೊಲೀಸ್ ಕಂಟ್ರೋಲ್ ರೂಮ್ ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೧, ೨೪೦೫೨೫೫, ಪೋಷಕರ ದೂರವಾಣಿ ಸಂಖ್ಯೆ ೮೯೫೧೪೨೧೯೦೯ ನ್ನು ಸಂಪರ್ಕಿಸಬೇಕೆಂದು ಟಿಳಕವಾಡಿ ಪೊಲೀಸ್ ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
೨೦೧೯-೨೦ ನೇ ಸಾಲಿಗಾಗಿ ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಬೆಳಗಾವಿ ಇವರು ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ ೧೯೬೦ ರ ಅಡಿಯಲ್ಲಿ ನೋಂದಣಿಯಾಗಿರಬೇಕು ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಕಛೇರಿಯಲ್ಲಿ ಸಂಯೋಜನೆಗೊಂಡಿರಬೇಕು. ಹಾಗೂ ಎಪ್ರೀಲ್ ೦೧-೨೦೧೮ ರಿಂದ ಮಾರ್ಚ ೩೧-೨೦೧೯ ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪರಿಸರ ಸೌಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಸಾಂಸ್ಕೃತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸಾಮಾಜಿಕ ಪಿಡುಗುಗಳು ಕ್ರೀಡೆಗಳು ಹಾಗೂ ಸಮಾಜ ಕಲ್ಯಾಣಗಳ ಬಗ್ಗೆ ಯುವ ಮಂಡಳಗಳು ಕೆಲಸ ಮಾಡಿದ ಖಲೆಗಳು ಇರಬೇಕು. ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿ ರೂ.೨೫,೦೦೦ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ ೧೦ ಕೊನೆಯ ದಿನವಾಗಿದೆ.
ಜಿಲ್ಲೆಯ ಆಸಕ್ತ ಹಾಗೂ ಅರ್ಹ ಯುವಕ, ಯುವತಿ, ಮಹಿಳಾ ಮಂಡಳಗಳು ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ನೆಹರು ಯುವ ಕೇಂದ್ರ, ಸಿ,ಟಿ,ಎಸ್, ನಂ:೯೬೬೩ ಪ್ಲಾಟ್ ನಂ : ೨೩೬೭ ಅಣ್ಣಪೂರ್ಣ ನಿಲಯ ೧ನೇ ಕ್ರಾಸ್, ಮಹಾಂತೇಶ ನಗರ, ಬೆಳಗಾವಿ ೫೯೦೦೧೭ ಇವರನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಬಹುದು.
ಅಗತ್ಯ ದಾಖಲಾತಿಗಳನ್ನು ನೆಹರು ಯುವ ಕೇಂದ್ರ, ಬೆಳಗಾವಿ ಸಿ,ಟಿ,ಎಸ್, ನಂ:೯೬೬೩ ಪ್ಲಾಟ್ ನಂ : ೨೩೬೭ ಅಣ್ಣಪೂರ್ಣ ನಿಲಯ ೧ನೇ ಕ್ರಾಸ್, ಮಹಾಂತೇಶ ನಗರ, ಬೆಳಗಾವಿ ಈ ಕಛೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೫೩೪೯೬ ಗೆ ಸಂಪರ್ಕಿಸಬೇಕೆಂದು ಬೆಳಗಾವಿ ನೆಹರು ಯುವ ಕೇಂದ್ರ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಂದ ಅರ್ಜಿ ಆಹ್ವಾನ
೨೦೧೯-೨೦ನೇ ಸಾಲಿನಲ್ಲಿ ಬೆಳಗಾವಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಮಹಿಳೆಯರಿಗಾಗಿ ಪಶು ಸಂಗೋಪನೆ ಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಹೈನುಗಾರಿಕೆ, ೩-ಕುರಿ, ಮೇಕೆ ಸಾಕಾಣಿಕೆ ಹಂದಿ ಸಾಕಾಣಿಕೆ ಘಟಕಗಳ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ.೯೦ ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ.೫೦ ರಷ್ಟು ಸಹಾಯಧನ ದಡಿ ಆಯಾ ತಾಲೂಕಿನ ಸೇವಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಬೇಡಿಕೆ ಆಧಾರಿತ ಯೋಜನೆಗಾಗಿ ಜಿಲ್ಲೆಗೆ ನಿಗಧಿಪಡಿಸಿರುವ ಗುರಿಗಳನ್ವಯ ಲಭ್ಯವಿರುವ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರು, ವಿಧವೆಯರು ದೇವದಾಸಿಯರು ಮತ್ತು ಇತರೆ ಸಂಕಷ್ಟಗೊಳಗಾದ ಮಹಿಳೆಯರಿಗೆ ಆಧ್ಯತೆಯನ್ನು ನೀಡಲಾಗುವುದು.
ಆಸಕ್ತರು ನಿಗಧಿತ ನಮೂನೆಯ ಅರ್ಜಿಗಳನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಂದ ಪಡೆದು ಸೂಕ್ತ ದಾಖಲಾತಿಗಳು ಹಾಗೂ ತಮ್ಮ ವ್ಯಾಪ್ತಿಯ ಸಮೀಪವಿರುವ ರೈತ ಸಂಪರ್ಕ ಕೇಂದ್ರದಲ್ಲಿ ಗುರುತಿನ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದ್ದು ಅರ್ಜಿಯಲ್ಲಿ ಈ ಕುರಿತು ನಮೂದಿಸಿ ಸೆಪ್ಟೆಂಬರ ೨೦ ರ ಒಳಗಾಗಿ ಕಛೇರಿಯ ವೇಳೆಯಲ್ಲಿ ಅರ್ಜಿಯನ್ನು ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಕಚೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಯ ಕಚೇರಿಯ ವೇಳೆಯಲ್ಲಿ ಮುದ್ದಾಂ ಹಾಗೂ ದೂರವಾಣಿಯ ಮೂಲಕ ಸಂಪರ್ಕಿಸುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಅಶೋಕ ಎಲ್. ಕೊಳ್ಳಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಅಥಣಿ ೦೮೨೮೯-೨೫೧೦೦೭, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಬೈಲಹೊಂಗಲ ೦೮೨೮೮-೨೩೩೨೨೯, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಬೆಳಗಾವಿ ೦೮೩೧-೨೪೨೭೪೩೮, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಚಿಕ್ಕೋಡಿ ೦೮೩೩೮-೨೭೨೨೦೩, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಗೋಕಾಕ ೦೮೩೩೨-೨೨೬೮೦೯, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಹುಕ್ಕೇರಿ ೦೮೩೩೩-೨೬೫೦೬೩, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಖಾನಾಪೂರ ೦೮೩೩೬-೨೨೨೪೮೮, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ರಾಯಭಾಗ ೦೮೩೩೧-೨೨೫೫೩೦, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ರಾಮದುರ್ಗ ೦೮೩೩೫-೨೪೨೧೧೭, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಸವದತ್ತಿ ೦೮೩೩೦-೨೨೨೪೦೭.
ಚಿಕ್ಕೋಡಿ ವಿಭಾಗ: ನಿಯಂತ್ರಣ ಕೊಠಡಿ ಪ್ರಾರಂಭ
ಚಿಕ್ಕೋಡಿ ವಿಭಾಗ ವ್ಯಾಪ್ತಿಯ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ ಮತ್ತು ಅಥಣಿ ಘಟಕಗಳ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಪ್ರಯಾಣಿಕರಿಗೆ ಸಂಸ್ಥೆಯ ವಾಹನಗಳ ವಿವಿಧ ಮಾರ್ಗಗಳ ಕಾರ್ಯಾಚರಣೆಯ ಸಮಯಗಳು ಹಾಗೂ ಬಸ್ ವ್ಯವಸ್ಥೆ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ಪಡೆಯಬಹುದು.
ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣ ೦೮೩೩೮೨೭೨೧೪೩, ೯೬೦೬೯೪೯೧೫೯, ನಿಪ್ಪಾಣಿ ಕೇಂದ್ರ ಬಸ್ ನಿಲ್ದಾಣ ೦೮೩೩೮೨೨೦೦೦೮, ಸಂಕೇಶ್ವರ ಕೇಂದ್ರ ಬಸ್ ನಿಲ್ದಾಣ ೦೮೩೩೩೨೭೩೩೪೦, ಹುಕ್ಕೇರಿ ಕೇಂದ್ರ ಬಸ್ ನಿಲ್ದಾಣ ೦೮೩೩೩೨೬೬೩೬೩, ಗೋಕಾಕ ಕೇಂದ್ರ ಬಸ್ ನಿಲ್ದಾಣ ೦೮೩೩೨೨೨೫೦೪೯, ರಾಯಬಾಗ ಕೇಂದ್ರ ಬಸ್ ನಿಲ್ದಾಣ ೦೮೩೩೧೨೨೪೨೯೨, ಅಥಣಿ ಕೇಂದ್ರ ಬಸ್ ನಿಲ್ದಾಣ ೦೮೨೮೯೨೫೧೧೨೭, ಕಾಗವಾಡ ಕೇಂದ್ರ ಬಸ್ ನಿಲ್ದಾಣ ೦೮೨೮೯೨೬೪೨೩೦ ಗಳ ಸಂಪರ್ಕ ಸಂಖ್ಯೆಗಳನ್ನು ಬಳಸಿ ಸಾರ್ವಜನಿಕರು ಪ್ರಯಾಣಿಕರು ತಮಗೆ ಅಗತ್ಯತೆಯಿರುವ ಮಾರ್ಗಗಳ ಬಸ್‌ಗಳ ಮಾಹಿತಿಯನ್ನು ತ್ವರಿತವಾಗಿ ಪಡೆಯಬಹುದಾಗಿದೆ.
ಸಾರ್ವಜನಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಾಕರಸಾಸಂಸ್ಥೆ ಚಿಕ್ಕೋಡಿ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ