Cancer Hospital 2
Beereshwara 36
LaxmiTai 5

ಟನಲ್‌ ಸರಿಪಡಿಸುವವರಗೆ ಟೋಲ್ ಬಂದ್ – ಸೂಚನೆ

Anvekar 3

ಪ್ರಗತಿವಾಹಿನಿ ಸುದ್ದಿ, ಕಾರವಾರ : ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾಗಿರುವ ಸುರಂಗ (Tunnel) ಮಾರ್ಗದಲ್ಲಿ ಸೋರಿಕೆಯಾಗುತ್ತಿದ್ದು, ಇದರಿಂದಾಗಿ ಅಪಾಯ ಎದುರಾಗುವ ಸಾಧ್ಯತೆ ಇರುವ ಕಾರಣಕ್ಕೆ ಹೀಗಾಗಿ ಟನಲ್‌ ಸರಿಪಡಿಸುವವರಗೆ ಟೋಲ್ ಬಂದ್ ಮಾಡುವಂತೆ ಸಚಿವ ಮಂಕಾಳು ವೈದ್ಯ ಐಆರ್ ಬಿ ಕಂಪನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟನಲ್ ವಿಚಾರ ಪ್ರಸ್ತಾಪಿಸಿದಾಗ ಐ ಆರ್ ಬಿ (IRB) ಅಧಿಕಾರಿಗಳನ್ನ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಸೈಲ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಟನಲ್ ವ್ಯವಸ್ಥೆ ಸರಿಪಡಿಸುವವರಗೆ ಟೋಲ್ ಬಂದ್ ಮಾಡಿ ಎಂದಿದ್ದಾರೆ.

Emergency Service

ಕಾರವಾರ ಬಳಿ ಬಿಣಗಾದಿಂದ ಕಾರವಾರ ನಗರಕ್ಕೆ ಪ್ರವೇಶಿಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway)ಟನಲ್ ನಿರ್ಮಿಸಲಾಗಿದೆ. ಆದರೆ‌ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಟನಲ್‌ಸೋರಿಕೆಯಾಗುತ್ತಿದೆ. ಇದರಿಂದ ಟನಲ್‌ ನಲ್ಲಿ ಪ್ರಯಾಣಿಸುವವರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಟನಲ್ ಫಿಟ್ನೆಸ್ ಪ್ರಮಾಣ ಪತ್ರ ನೀಡುವವರೆಗೂ ಟನಲ್ ನಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.

ಐಆರ್ ಬಿ ಕಂಪನಿ ಮಾಜಾಳಿಯಿಂದ ಭಟ್ಕಳದ ತನಕ ಚಥುಷ್ಪತ ಹೆದ್ದಾರಿ ಕಾಮಗಾರಿ ನಡೆಸಿದೆ. ಆದರೆ ಎಲ್ಲೂ ಒಂದು ಕಡೆ ಸರಿಯಾಗಿ ಕಾಮಗಾರಿ ಮಾಡಿಲ್ಲ.ಇದರಿಂದಾಗಿ ಸಾರ್ವಜನಿಕರು ನಿತ್ಯವೂ ಸಮಸ್ಯೆ ಎದುರಿಸುವಂತಾಗಿದೆ. ಸರಿಯಾದ ರೀತಿಯಲ್ಲಿ ಹೆದ್ದಾರಿ ಕಾಮಗಾರಿ ಮಾಡದೆ ಹೋದರೆ. ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಇವರ ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಜನ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ‌ನಿರ್ಮಾಣ ಮಾಡಿದ್ದೀರಿ..ನಾವು ಈಗ ಸುಮ್ಮನೆ ಇರಲು ಸಾಧ್ಯವಿಲ್ಲ. ಜನರಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸದೆ ಹೋದರೆ ತಾವು ಕೂಡ ತೊಂದರೆ ಎದುರಿಸಬೇಕಾಗಿ ಬರಬಹುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Bottom Add3
Bottom Ad 2