Latest

ಚಿತ್ರಾ ರಾಮಕೃಷ್ಣ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಕ್ರಮ ಆರೋಪ ಹಿನ್ನೆಲೆಯಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ವಿರುದ್ಧ ಸಿಬಿಐ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.

ಚಿತ್ರಾ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಮರುದಿನವೇ ಸಿಬಿಐ ಕ್ರಮ ಕೈಗೊಂಡಿದ್ದು, ಮತ್ತೋರ್ವ ಮಾಜಿ ಸಿಇಒ ರವಿ ನಾರಾಯಣ್ ಹಾಗೂ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಆನಂದ್ ಸುಬ್ರಹ್ಮಣ್ಯಂ ವಿರುದ್ಧವೂ ಲುಕ್ ಔಟ್ ನೊಟೀಸ್ ಜಾರಿ ಮಾಡಿದೆ.

ಷೇರುಪೇಟೆಯಲ್ಲಿ ಟಿಕ್ ಬೈ ಟಿಕ್ ವಂಚನೆ ಪ್ರಕರಣ ಎಂದೇ ಕರೆಯಲಾಗಿರುವ ಕೇಸ್ ಗೆ ಸಂಬಂಧಿಸಿದಂತೆ ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ಅವರನ್ನು ಸಿಬಿಐ ಪ್ರಶ್ನಿಸಿದೆ. ಇನ್ನು 2013-16ರವರೆಗೆ ಚಿತ್ರಾ ರಾಮಕೃಷ್ಣ ಎನ್ ಎಸ್ ಇ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಆಗಿದ್ದರು. ಬಳಿಕ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಹಣಕಾಸು ವ್ಯವಹಾರ ಕುರಿತ ಕೆಲ ಗೌಪ್ಯ ಮಾಹಿತಿಯನ್ನು ಹಿಮಾಲಯದ ಯೋಗಿ ಎಂಬ ನಿಗೂಢ ವ್ಯಕ್ತಿಯೊಂದಿಗೆ ಚಿತ್ರಾ ಹಂಚಿಕೊಂಡಿದ್ದು, ಆ ವ್ಯಕ್ತಿ ಯಾರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಅಸಲಿಗೆ ಹಿಮಾಲಯನ್ ಯೋಗಿ ಎಂಬ ವ್ಯಕ್ತಿ ಯಾರು ಎಂಬುದೇ ಗೊತ್ತಿಲ್ಲ. ಈ ನಿಗೂಢ ವ್ಯಕ್ತಿ ಭಾರತದ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟಿನ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನು 20 ವರ್ಷದಿಂದ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಬಹಿರಂಗ ಆಗಿರುವುದೇ ದೇಶದ ಅತಿ ದೊಡ್ಡ ಶೇರು ಮಾರುಕಟ್ಟೆ ರಹಸ್ಯ ಮಾಹಿತಿಯನ್ನು ಹಿಮಾಲಯದ ಯೋಗಿ ಎಂಬ ನಿಗೂಢ ವ್ಯಕ್ತಿ ಜತೆ ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಹಂಚಿಕೊಂಡಿದ್ದಾರೆ ಎಂಬ ವಿಷಯದಿಂದ. ಒಟ್ಟಾರೆ ಹಿಮಾಲಯನ್ ಯೋಗಿ ನಿಗೂಢ ವ್ಯಕ್ತಿ ಹಗರಣ ಇದೀಗ ಷೇರುಮಾರುಕಟ್ಟೆ ತಳಹದಿಯನ್ನೇ ಅಲುಗಾಡಿಸುತ್ತಿದೆ.

Home add -Advt

ನಳಿನ್ ಕುಮಾರ್ ಕಟೀಲ್ ರಿಂದ ನನಗೆ ಜೀವ ಬೆದರಿಕೆ ಕರೆ; ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ

Related Articles

Back to top button