Karnataka News

*ಲಿಫ್ಟ್ ಕಾಮಗಾರಿ ಹೊಂಡಕ್ಕೆ ಬಿದ್ದ 5 ವರ್ಷದ ಬಾಲಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಸಾಲು ಸಾಲು ದುರಂತಗಳು ಒಂದೆರಡಲ್ಲ. ಈ ನಡುವೆ ಲಿಫ್ಟ್ ಕಾಮಗಾರಿಗೆ ತೋಡಿದ್ದ ಹೊಂಡಕ್ಕೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಸುಹಾನ್ ಗೌಡ (5) ಮೃತ ಬಾಲಕ. ಕನ್ನಮಂಗಲದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡದ ಲಿಫ್ಟ್ ಗೆಂದು 5 ಅಡಿ ಗುಂಡಿ ತೊಡಲಾಗಿದ್ದು, ಭಾರಿ ಮಳೆಯಾದರೂ ಲಿಫ್ಟ್ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಆದರೂ ಸಿಬ್ಬಂದಿಗಳು, ಈಬಗ್ಗೆ ಮುನ್ನೆಚ್ಚರಿಕೆ ವಹಿಸಿಲ್ಲ.

ಸುಹಾನ್ ಮನೆ ಮುಂಭಾಗ ಆಟವಾಡುವಾಗ ಆಕಸ್ಮಿಕವಾಗಿ ನೀರು ತುಂಬಿದ್ದ ಲಿಫ್ಟ್ ಹೊಂಡಕ್ಕೆ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಮಿಲ್ಕ್ ಡೈರಿ ಅಧ್ಯಕ್ಷನ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Related Articles

Back to top button