ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಯ ಮತಗಳ ಎಣಿಕೆ ಶನಿವಾರ ನಡೆಯಲಿದೆ. ಎಲ್ಲ 224 ಕ್ಷೇತ್ರಗಳ ಚುನಾವಣೆ ಫಲಿತಾಂಶ ಶನಿವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಹೊರಬೀಳಲಿದೆ. ಇಡೀ ರಾಜ್ಯ ಫಲಿತಾಂಶಕ್ಕಾಗಿ ಕಾದು ಕುಳಿತಿದೆ.
ಪ್ರತಿಯೊಂದು ಕ್ಷೇತ್ರದ ಮತದಾರರಿಗೆ ತಮ್ಮ ಕ್ಷೇತ್ರದಲ್ಲಿ ಯಾರು ಆಯ್ಕೆಯಾಗಿದ್ದಾರೆ ಎನ್ನುವುದನ್ನು ತಿಳಿಯುವ ಕುತೂಹಲವಿದ್ದೇ ಇರುತ್ತದೆ. ಇದರ ಜೊತೆಗೆ ಕೆಲವು ಪ್ರಮುಖ ಅಂಶಗಳ ಕಡೆಗೂ ಇಡೀ ರಾಜ್ಯದ ಗಮನ ಕೇಂದ್ರೀಕೃತವಾಗಲಿದೆ. ಪ್ರಮುಖ ಕುತೂಹಲಗಳ ಪಟ್ಟಿ ಇಲ್ಲಿದೆ:
- ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಯಾವ ಪಕ್ಷದ ಕೈಗೆ?
- ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರವಾದರೆ ಎಲ್ಲ ಪಕ್ಷಗಳ ಮುಂದಿನ ನಡೆ ಏನು?
- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಕ್ಷೇತ್ರದಲ್ಲಿ ಗೆಲುವು ಯಾರಿಗೆ?
- ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ಏನು?
- ಕನಕಪುರದಲ್ಲಿ ಡಿ.ಕೆ.ಶಿವಕುಮಾರ ಗೆದ್ದರೋ, ಆರ್.ಅಶೋಕ ಗೆದ್ದರೋ?
- ಬಿಜೆಪಿ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರಿ ಸ್ಪರ್ಧಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭವಿಷ್ಯ ಏನಾಯಿತು?
- ಮಾಜಿ ಸಚಿವ ರಮೇಶ ಜಾರಕಿಹೊಳಿ ಗೆದ್ದರೋ? ಸೋತರೋ?
- ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವ ವಿ.ಸೋಮಣ್ಣ ಮತ್ತು ಆರ್.ಅಶೋಕ ಎಲ್ಲಿ ಗೆದ್ರು? ಎಲ್ಲಿ ಸೋತ್ರು?
- ಮೊದಲ ಬಾರಿಗೆ ಸ್ಪರ್ಧಿಸಿರುವ ಬಿಎಸ್ವೈ ಪುತ್ರ ವಿಜಯೇಂದ್ರ ಭವಿಷ್ಯ ಏನಾಯಿತು?
- ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭವಿಷ್ಯ ಏನಾಯಿತು?
- ಜಿಲ್ಲೆಯಿಂದಲೇ ಗಡಿಪಾರಾಗಿರುವ ವಿನಯ ಕುಲಕರ್ಣಿ ಗೆದ್ದರೋ? ಸೋತರೋ?
- ಜನಾರ್ಧನ ರೆಡ್ಡಿ ಹೊಸ ಪಕ್ಷದ ಭವಿಷ್ಯವೇನಾಯಿತು?
- ರಾಜ್ಯದಲ್ಲಿ ಆಮ್ ಆದ್ಮಿ ಭವಿಷ್ಯವೇನು?
- ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಏನಾದರು?
- ಸ್ಪರ್ಧಿಸಿರುವ ಹಾಲಿ ಸಚಿವರಲ್ಲಿ ಎಷ್ಟು ಜನ ಗೆದ್ದರು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ