ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ ; ಏಕಾಏಕಿ ಸಿನಿಮೀಯ ರೀತಿಯಲ್ಲಿ ಕಬ್ಬು ತುಂಬಿದ ಟ್ಯಾಕ್ಟರ್ ಡಬ್ಬಿಗಳು ಚಾಲಕನಿಲ್ಲದೆ ಚಲಿಸುತ್ತಿರುವುದನ್ನು ನೋಡಿದ ಜನರು ಭಯಭೀತರಾಗಬೇಕಾಯಿತು.
ಇಲ್ಲಿ ಯಾವುದೋ ಸಿನಿಮಾ ಚಿತ್ರೀಕರಣ ನಡೆಯುತ್ತಿದೆಯೇ ಎಂದು ಭಾಸವಾಗುತ್ತಿತ್ತು. ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ರಾಜಧಾನಿ ಹೊಟೇಲ್ ಹತ್ತಿರ ಟ್ಯಾಕ್ಟರ್ ನಿಯಂತ್ರಣ ತಪ್ಪಿ ಉರಳಿ ಬಿದ್ದಿದ್ದರಿಂದ ಮೂರು ಗಂಟೆಗಳ ವಾಹನ ಸಂಚಾರ ಅಸ್ಥವ್ಯಸ್ಥವಾಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ರಾಜಧಾನಿ ಹೊಟೇಲ್ ಹತ್ತಿರದಲ್ಲಿ ರಸ್ತೆ ತುಸು ಎತ್ತರವಿರುವುದರಿಂದ ವಾಹನದ ಚಾಲಕ ಗೇರ್ ಬದಲಾಯಿಸುವ ಸಮಯದಲ್ಲಿ ಎಂಜಿನ್ ಹತ್ತಿರವಿರುವ ಡಬ್ಬಿಯ ಲಾಕ್ ಬಿಚ್ಚಿದ್ದರಿಂದ ಎರಡು ಡಬ್ಬಿಗಳು ಹಿಂಬದಿಯಲ್ಲಿ ಚಲಿಸಲು ಪ್ರಾರಂಭಿಸಿದವು.
ಎಂಜಿನ್ ಇಲ್ಲದೆ ಡಬ್ಬಿಗಳು ಮಾತ್ರ ಚಲಿಸುತ್ತಿರುವುದನ್ನು ನೋಡಿದ ಜನರು ಭಯಭೀತರಾಗಿ ಮೂಕ ಪ್ರೇಕ್ಷರಂತೆ ನಿಂತು ನೋಡುತ್ತಿದ್ದರು. ಆ ವೇಳೆ ವ್ಯಕ್ತಿಯೋರ್ವ ಓಡಿ ಬಂದು ಹಿಂದಿನ ಡಬ್ಬಿಗೆ ಅಡ್ಡಲಾಗಿ ಕಲ್ಲು ಹಚ್ಚಿದ ಪರಿಣಾಮವಾಗಿ ಹಿಂದಿನ ಡಬ್ಬಿ ನಿಂತು ಮುಂದಿನ ಡಬ್ಬಿ ಪಲ್ಟಿಯಾಯಿತು.
ಇನ್ನೂ ತುಸು ಟ್ಯಾಕ್ಟರ್ ಡಬ್ಬಿಗಳು ಹಿಂದೆ ಚಲ್ಲಿಸಿದ್ದರೆ 60 ಪ್ರಯಾಣಿಕರಿರುವ ಬಸ್, ದ್ವಿ ಚಕ್ರವಾಹನಗಳಿಗೆ ಡಿಕ್ಕಿ ಹೊಡೆಯುತ್ತಿತ್ತು. ಹಲವರ ಪ್ರಾಣ ಹಾನಿಯಾಗುವ ಸಂಭವಿತ್ತು. ಓರ್ವ ವ್ಯಕ್ತಿಯಿಂದ ಹಲವಾರು ಜನರು ಬಚಾವಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ