Kannada NewsKarnataka NewsNationalPolitics

*ಟ್ರಾಫಿಕ್ ಪೈನ್: 50% ಡಿಸ್ಕೌಂಟ್ ಆಫರ್ ನೀಡಿದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಸಂಚಾರಿ ನಿಯಮ ಉಲ್ಲಂಘಿಸಿ ಫೈನ್ ಕಟ್ಟುವದನ್ನು ಬಾಕಿ ಉಳಿಸಿಕೊಂಡಿದ್ದ ಜನರಿಗೆ ಸದ್ಯಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ.

ರಾಜ್ಯಾದಾದ್ಯಂತ ಬಾಕಿ ಇರುವ ದಂಡವನ್ನು ವಿಲೆವಾರಿ ಮಾಡಲು ಸರ್ಕಾರ 50% ಡಿಸ್ಕೌಂಟ್ ಆಫರ್ ನೀಡಿದೆ. 

ಆಗಸ್ಟ್ 23, 2025 ರಿಂದ ಸೆಪ್ಟೆಂಬರ್ 12, 2025 ರವರೆಗೆ ಈ ಡಿಸ್ಕೊಂಟ್ ಆಫ‌ರ್ ಲಭ್ಯವಿದ್ದು ಇದನ್ನ ಉಪಯೋಗಿಸಿಕೊಂಡು ಗಾಡಿಯ ಮೇಲೆ ದಂಡ ಇರುವವರು ಫೈನ್ ಕಟ್ಟಬಹುದಾಗಿದೆ. ಇನ್ನು ಈ ಆಫರ್ ಕೇವಲ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಡೆದ ಸಂಚಾರ ನಿಯಮ ಉಲ್ಲಂಘನೆಗಳಿಗೆ ಮಾತ್ರವಾಗಿದೆ.

ಇನ್ನು 50% ಡಿಸ್ಕೊಂಟ್ ಆಫರ್ ಟೈಆಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿರುವವರಿಗೆ ಹಾಗೂ ಮಿತಿ ಮೀರಿದ ವೇಗದ ಚಾಲನೆ, ಹೆಲೈಟ್ ಧರಿಸದೇ ಚಾಲನೆ ಮಾಡುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಬಳಕೆ ಮಾಡದಿರುವುದು, ಗಾಡಿ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡುವುದು ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರಿಗೆ ಈ ಡಿಸ್ಕೊಂಟ್ ಅನ್ವಯವಾಗುತ್ತದೆ.

Home add -Advt

ಇನ್ನು ಆಫ‌ರ್ ಮೂಲಕ ದಂಡ ಪಾವತಿ ಮಾಡಲು ಕರ್ನಾಟಕ ಒನ್ ವೆಬ್ ಸೈಟ್ ಹಾಗೂ ಪೇಟಿಎಂ ಬಳಕೆ ಮಾಡಬಹುದು, ಅಲ್ಲದೇ, ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿ ಸಹ ಮಾಡಬಹುದಾಗಿದೆ.

Related Articles

Back to top button