ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿ ನಗರಕ್ಕೆ ಆಗಮಿಸುತ್ತಿರು ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದವರೆಗೆ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕೆಂದು ಪೊಲೀಸರು ಸೂಚಿಸಿದ್ದಾರೆ.
1) ನಿಪ್ಪಾಣಿ, ಕೊಲ್ಲಾಪೂರ, ಅಥಣಿ, ಚಿಕ್ಕೋಡಿ, ಸಂಕೇಶ್ವರ, ಯಮಕನಮರ್ಡಿ, ಕಾಕತಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸಿ ಖಾನಾಪೂರ/ಗೋವಾ ಕಡೆಗೆ ಸಂಚರಿಸುವ ವಾಹನಗಳು ಹಿಂಡಾಲ್ಕೋ ಅಂಡರ್ ಬ್ರಿಜ್, ಬಾಕ್ಸ್ಟ್ ರಸ್ತೆ, ಫಾರೆಸ್ಟ್ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್, ಶೌರ್ಯ ಸರ್ಕಲ್ (ಮಿಲ್ಟ್ರಿ ಆಸ್ಪತ್ರೆ), ತಿಮ್ಮಯ್ಯ ರಸ್ತೆ, ಕೇಂದ್ರಿಯ ವಿದ್ಯಾಲಯ ನಂ-2, ಶರ್ಕತ್ ಪಾರ್ಕ, ಇಂಡಿಪೆಂಡೆನ್ಸ್ ರಸ್ತೆ, ಗೌಳಿ ಗಲ್ಲಿ, ಫರ್ನಾಂಡಿಸ್ ರಸ್ತೆ, ನೆಲ್ಸನ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರ, ಕಾಂಗ್ರೇಸ್ ರಸ್ತೆ ಸೇರಿ ಮುಂದೆ ಸಂಚರಿಸುವುದು.
2) ಶಹಾಪೂರ, ಅನಗೋಳ, ವಡಗಾಂವ, ಯಳ್ಳೂರ ಬಾಚಿ ಕಡೆಗಳಿಂದ, ಕಾಕತಿ ನಿಪ್ಪಾಣಿ ಕಡೆಗೆ ಸಂಚರಿಸುವ ವಾಹನಗಳು ಅನಗೋಳ 4ನೇ ರೈಲ್ವೆ ಗೇಟ್, ಬೆಲ್ಲೊ ಸರ್ಕಲ್, 3ನೇ ರೈಲ್ವೆ ಗೇಟ್, ಕಾಂಗ್ರೇಸ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರ ಹತ್ತಿರ ಎಡತಿರುವ ಪಡೆದುಕೊಂಡು, ತಿಮ್ಮಯ್ಯ ರಸ್ತೆ, ಶೌರ್ಯ ಚೌಕ್, ಗಾಂಧಿ ಸರ್ಕಲ್, ಬಾಕ್ಸೈಟ್ ರಸ್ತೆ ಮೂಲಕ ಸಂಚರಿಸುವುದು.
3) ಬೆಳಗಾವಿ ನಗರದಿಂದ ಕಾಕತಿ, ನಿಪ್ಪಾಣಿ, ಕೊಲ್ಲಾಪೂರ, ಅಥಣಿ, ಕಡೆಗೆ ಸಂಚರಿಸುವ ವಾಹನಗಳು ಕೃಷ್ಣದೇವರಾಯ ವೃತ್ತ, ಹೊಟೇಲ್ ರಾಮದೇವ, ಕೆಎಲ್‌ಇ ಆಸ್ಪತ್ರೆ ರಸ್ತೆ, ಕೆಎಲ್‌ಇ ಛತ್ರಿ ಮುಖಾಂತರ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಸೇರಿ ಸಂಚರಿಸುವುದು.
4) ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಹಿರೇಬಾಗೇವಾಡಿ ಕಡೆಗಳಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ಅಲಾರವಾಡ ಬ್ರಿಜ್, ಮುಚ್ಚಂಡಿ ಗ್ಯಾರೇಜ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ಎದುರಿನ ರಸ್ತೆ ಮುಖಾಂತರ ಸಂಚರಿಸುವುದನ್ನು ನಿರ್ಬಂಧಿಸಿದ್ದು, ಇವು ರಾಷ್ಟ್ರೀಯ ಹೆದ್ದಾರಿ 4 ರ ಮುಖಾಂತರ ನಿಸರ್ಗ ಧಾಬಾ ಹತ್ತಿರ ಎಡತಿರುವು ಪಡೆದುಕೊಂಡು ಕೆಪಿಟಿಸಿಎಲ್ ರಸ್ತೆ ಮೂಲಕ ನಗರ ಪ್ರವೇಶಿಸುವುದು. ಗೋವಾ ಹಾಗೂ ಖಾನಾಪೂರ ಕಡೆಗೆ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿ-4 ರ ಮೂಲಕ ಮುಂದೆ ಸಾಗಿ ಕೆಎಲ್‌ಇ ಛತ್ರಿ ಹತ್ತಿರ ಸರ್ವಿಸ್ ರಸ್ತೆ ಸೇರಿ, ಶಿವಾಲಯ ಕ್ರಾಸ್, ಬಾಕ್ಸೈಟ್ ರಸ್ತೆ ಸೇರಿ ಮುಂದೆ ಸಂಚರಿಸುವುದು.
5) ಬೆಳಗಾವಿ ನಗರದಿಂದ ಗೋಕಾಕ, ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಹಿರೇಬಾಗೇವಾಡಿ ಕಡೆಗೆ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ, ಕೃಷ್ಣದೇವರಾಯ ವೃತ್ತ, ಹೊಟೇಲ್ ರಾಮದೇವ, ಕೆಎಲ್‌ಇ ಆಸ್ಪತ್ರೆ ರಸ್ತೆ, ಕೆಎಲ್‌ಇ ಛತ್ರಿ, ಹಿಂಡಾಲ್ಕೋ ಅಂಡರ್ ಬ್ರಿಜ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಸೇರಿ ಮುಂದೆ ಸಂಚರಿಸುವುದು.
6) ವೆಂಗುರ್ಲಾ, ಸಾವಂತವಾಡಿ, ಹಿಂಡಲಗಾ, ಸುಳಗಾ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿ 4ರ ಕಡೆಗೆ ಸಂಚರಿಸುವ ವಾಹನಗಳು ಫಾರೆಸ್ಟ್ ನಾಕಾ ಹತ್ತಿರ ನಗರ ಕಡೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ್ದು. ಬಾಕ್ಸೈಟ್ ರಸ್ತೆ, ಹಿಂಡಾಲ್ಕೋ ಅಂಡರ್ ಬ್ರಿಜ್ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರಿ ಮುಂದೆ ಸಂಚರಿಸುವುದು.
7) ವಿಜಯಪುರ, ಬಾಗಲಕೋಟ, ಯರಗಟ್ಟಿ, ನೇಸರಗಿ ಕಡೆಗಳಿಂದ ಬೆಳಗಾವಿ ನಗರದ ಕಡೆಗೆ ಬರುವ ವಾಹನಗಳನ್ನು ಮಾರಿಹಾಳ ಪೊಲೀಸ್ ಠಾಣೆಯ ಹತ್ತಿರ ತಡೆದು ಬಲತಿರುವು ಪಡೆದುಕೊಂಡು ಸುಳೇಭಾವಿ ಗ್ರಾಮದ ಮುಖಾಂತರ ಖನಗಾಂವ ಕ್ರಾಸ್ ಮೂಲಕ ಕಣಬರಗಿ ರಸ್ತೆ, ಕನಕದಾಸ ಸರ್ಕಲ್, ರಾಷ್ಟ್ರೀಯ ಹೆದ್ದಾರಿ 4 ರ ಮುಖಾಂತರ ನಿಸರ್ಗ ಧಾಬಾ ಹತ್ತಿರ ಎಡತಿರುವು ಪಡೆದುಕೊಂಡು ಕೆಪಿಟಿಎಲ್ ರಸ್ತೆ ಮೂಲಕ ನಗರ ಪ್ರವೇಶಿಸುವುದು.
8) ಬೆಳಗಾವಿ ನಗರದಿಂದ ಸಾಂಬ್ರಾ, ನೇಸರಗಿ, ಯರಗಟ್ಟಿ, ಬಾಗಲಕೋಟ, ವಿಜಯಪುರ ಕಡೆಗೆ ಸಂಚರಿಸುವ ವಾಹನಗಳು `ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿ ಮುಖಾಂತರ ಸಂಚರಿಸಿ, ಖನಗಾಂವ ಕ್ರಾಸ್, ಸುಳೇಭಾವಿ ಗ್ರಾಮ ಮೂಲಕ ಬಾಗಲಕೋಟ ರಸ್ತೆಗೆ ಸೇರಿ ಸಂಚರಿಸುವುದು.
9) Y-Junction, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲ, ಹೇಮು ಕಲಾನಿ ಚೌಕ, ಶನಿ ಮಂದಿರ ಕಪಿಲೇಶ್ವರ ಫೈ ಓವರ್, ಬ್ಯಾಂಕ್ ಆಫ್ ಇಂಡಿಯಾ ವೃತ್ತ, ಹೊಸ ಡಬಲ್ ರಸ್ತೆ, ಹಳೆ ಪಿಬಿ ರಸ್ತೆ, ಪ್ಯಾಟ್ಸನ್ ಶೋ ರೂಂ, ಧಾರವಾಡ ನಾಕಾ ಕಡೆಗೆ ಹೆಚ್ಚು ಜನ ದಟ್ಟಣೆಯಾಗುವುದರಿಂದ ಮೇಲೆ ತಿಳಿಸಿದ ಪರ್ಯಾಯ ಮಾರ್ಗವನ್ನು ಬಳಸುವುದು.
10) ದಿನಾಂಕ: 27/02/2023 ರಂದು ಮುಂಜಾನೆ 08 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ಎಲ್ಲ ಭಾರಿ ವಾಹನಗಳು ಎಲ್ಲ ದಿಕ್ಕುಗಳಿಂದ ಬೆಳಗಾವಿ ನಗರ ಪ್ರವೇಶಿಸುವುದನ್ನು ಹಾಗೂ ನಗರದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ :
ಧಾರವಾಡ, ಕಿತ್ತೂರ, ಬೈಲಹೊಂಗಲ, ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಎಲ್ಲ ವಾಹನಗಳು ಅಲಾರವಾಡ ಅಂಡರ್ ರಸ್ತೆ ಪಕ್ಕದಲ್ಲಿರುವ ವೋಕ್ಸ್ ವ್ಯಾಗನ್ ಶೋ ರೂಂ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
ಧಾರವಾಡ, ಕಿತ್ತೂರ, ಬೈಲಹೊಂಗಲ, ಸವದತ್ತಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳು ಸುವರ್ಣ ವಿಧಾನ ಸೌಧ ಓ.ಪಿ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
> ಬಾಗಲಕೋಟ, ಗೋಕಾಕ, ನಿಪ್ಪಾಣಿ, ಕಾಕತಿ ಕಡೆಯಿಂದ ಬರುವ ವಾಹನಗಳು ಯುವರಾಜ ಧಾಭಾ ಮತ್ತು ವಿಆರ್‌ಲ್ ವರ್ಕಶಾಫ್ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು,
> ಬಾಗಲಕೋಟ, ಗೋಕಾಕ, ನಿಪ್ಪಾಣಿ, ಕಾಕತಿ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಕ್ರಾಸ್ ಮುಖಾಂತರ ಹೋಗಿ ಪೊಲೀಸ್ ಟೌನ್‌ಶಿಪ್ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
> ಖಾನಾಪೂರ, ಅನಗೋಳ ಪೀರನವಾಡಿ ಕಡೆಯಿಂದ ಬರುವ ವಾಹನಗಳು ಶಹಾಪೂರ ಕಲ್ಮೇಶ್ವರ ಮಂದಿರದ ಮಾರ್ಗವಾಗಿ ಕೆರೆಯ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
https://pragati.taskdun.com/note-monday-school-hours-change-where-will-prime-minister-modis-road-show-start/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ