Latest

ಸಂಚಾರಿ ನಿಯಮ ಉಲ್ಲಂಘನೆ; 17,500 ರೂಪಾಯಿ ದಂಡ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಬೈಕ್ ಸವಾರನೊಬ್ಬನಿಗೆ ಪೊಲೀಸರು ಬರೋಬ್ಬರಿ 17,500 ರೂಪಾಯಿ ದಂಡ ವಿಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನಿವಾಸಿ ಮೊಹಮ್ಮದ್ ರಫೀಕ್ ಗುಡಗೇರಿ ಎಂಬುವವರು ಹಲವು ದಿನಗಳಿಂದ ಪ್ರತಿದಿನ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಪಲ್ಸರ್ ಬೈಕ್ ನಲ್ಲಿ ಓಡಾಡುತ್ತಿದ್ದರು. ಈ ಬಗ್ಗೆ ಶಿರೂರು ಪಾರ್ಕ್ ಬಳಿಯ ಹರ್ಷ ಹೋಟೆಲ್ ಬಳಿ ಉತ್ತರ ಟ್ರಾಫಿಕ್ ಎ ಎಸ್ ಐ ರಾಮಜಾನಬಿ ಅಳಗವಾಡಿ ಹಾಗೂ ಪೊಲೀಸ್ ಪೇದೆ ಸಂತೋಷ್ ಚೌವ್ಹಾಣ್ ನಿತ್ಯವೂ ಕರ್ತವ್ಯದಲ್ಲಿದ್ದಾಗ ಗಮನಿಸಿದ್ದರು. ಬೈಕ್ ನಂಬರ್ ಪರಿಶೀಲನೆ ನಡೆಸಿದಾಗ ಬೈಕ್ ಸವಾರ ಹಲವು ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿ, ದಂಡ ಪಾವತಿಸದೇ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ಬೈಕ್ ಸವಾರ ಮೊಹಮ್ಮದ್ ರಫೀಕ್ ಬರೋಬ್ಬರಿ 23 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಹಲವು ಬಾರಿ ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿದ್ದಾರೆ. 2017ರಿಂದ ಈವರೆಗೆ ಇದೇ ರೀತಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿರುವುದು ತಿಳಿದುಬಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು 17,500 ರೂಪಾಯಿ ದಂಡ ವಿಧಿಸಿದ್ದಾರೆ. ಆದರೆ ಬೈಕ್ ಸವಾರ ಮೊಹಮ್ಮದ್ ರಫೀಕ್ ದಂಡದ ಮೊತ್ತ ಪಾವತಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬೈಕ್ ನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಮಹಾರಾಷ್ಟ್ರ-ಬೆಳಗಾವಿ ಬಸ್ ಸಂಚಾರ ಸ್ಥಗಿತ

https://pragati.taskdun.com/maharashtrabelagavimsrtc-busstopborder-issue/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button