Kannada NewsLatest

ನಾಳೆ 11 ಗಂಟೆವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಗೆ ನಾಳೆ, ಗುರುವಾರ ರಾಜ್ಯಪಾಲರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 11 ಗಂಟೆಯವರೆಗೆ ಖಾನಾಪುರ ಕಡೆಯಿಂದ ಬರುವ ವಾಹನಗಳಿಗೆ 3 ನೇ ರೈಲ್ವೆ ಗೇಟ್ ಮೂಲಕ ಪ್ರವೇಶ ನೀಡಲಾಗುವುದು.

ನಗರದಿಂದ ಖಾನಾಪುರ ಕಡೆ ಹೋಗುವವರು ಕಾಂಗ್ರೆಸ್ ರಸ್ತೆ ಮೂಲಕ ಹೋಗಬೇಕು.

Home add -Advt

11 ಗಂಟೆಯ ನಂತರ ಈಗಿನಂತೆ, ಅಂದರೆ ಖಾನಾಪುರ ಕಡೆಯಿಂದ ಬರುವವರು ಕಾಂಗ್ರೆಸ್ ರಸ್ತೆ ಮೂಲಕ ಹಾಗೂ ಖಾನಾಪುರ ಕಡೆ ಹೋಗುವವರು ರೈಲ್ವೆ ಓವರ್ ಬ್ರಿಜ್ ಮೂಲಕ ಹೋಗಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button