*ಕೋಚಿಂಗ್ ಸೆಂಟರಗೆ ಮಳೆ ನೀರು ನುಗ್ಗಿ ದುರಂತ: ಮೂವರು ವಿದ್ಯಾರ್ಥಿಗಳು ಬಲಿ*
ಪ್ರಗತಿವಾಹಿನಿ ಸುದ್ದಿ: ಬಿಟ್ಟು ಬಿಡದೆ ಸುರಿಯುತ್ತಿರುವ ರಣ ಭೀಕರ ಮಳೆಗೆ ನೆಲಮಾಳಿಗೆಯಲ್ಲಿರುವ ಗ್ರಂಥಾಲಯಕ್ಕೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟು 27 ವಿದ್ಯಾರ್ಥಿಗಳು ಪಾರಾಗಿದ್ದಾರೆ.
ಮೂರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ದುರಂತ ದೆಹಲಿಯ ಹಳೆಯ ರಾಜೇಂದರ್ ನಗರದಲ್ಲಿ ರಾವ್ ಅವರ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ಸಂಭವಿಸಿದೆ. ಎನ್‌ಆರ್‌ಎಫ್ ಮತ್ತು ಅಗ್ನಿಶಾಮಕ ದಳ ಸೇರಿದಂತೆ ಹಲವು ರಕ್ಷಣಾ ತಂಡಗಳು ಪೊಲೀಸರೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ರಾತ್ರಿ ಎನ್ ಡಿಆರ್ ಎಫ್ ತಂಡ ವಿದ್ಯಾರ್ಥಿಗಳ ಶವಗಳನ್ನು ಹೊರ ತೆಗೆದಿದೆ.
ನಿರ್ಲಕ್ಷ್ಯದಿಂದಾಗಿ ಸಾವಿಗೆ ಕಾರಣವಾದ ಆರೋಪದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕೋಚಿಂಗ್ ಸೆಂಟರ್ ನ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನ ಖಂಡಿಸಿ ವಿದ್ಯಾರ್ಥಿಗಳು ಸ್ಥಳದಲ್ಲಿ ಪ್ರತಿಭನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ