Latest

ಪ್ರಯಾಣಿಕನ ಮೇಲೆ ಹರಿದ ರೈಲು; ನಿಲ್ದಾಣದಲ್ಲೇ ದುರಂತ

ಪ್ರಗತಿವಾಹಿನಿ ಸುದ್ದಿ; ಕೋಲಾರ: ರೈಲು ಇಳಿಯುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಎಕ್ಸ್ ಪ್ರೆಸ್ ರೈಲು ಹರಿದ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆ ಮಾಲೂರಿನ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಪ್ಯಾಸೆಂಜರ್ ರೈಲೊಂದು ಸಿಗ್ನಲ್ ಸಮಸ್ಯೆಯ ತಾಂತ್ರಿಕ ಕಾರಣಕ್ಕೆ ಮಾರ್ಗ ಮಧ್ಯೆ ನಿಂತಿದೆ. ಪ್ರಯಾಣಿಕರು ರೈಲಿನಿಂದ ಇಳಿಯತೊಡಗಿದ್ದಾರೆ. ಈ ವೇಳೆ ಪಕ್ಕದ ಟ್ರ್ಯಾಕ್ ನಲ್ಲಿ ಬಂದ ಎಕ್ಸ್ ಪ್ರೆಸ್ ರೈಲು ಪ್ರಯಾಣಿಕರೊಬ್ಬರ ಮೇಲೆ ಹರಿದು ಹೋಗಿದೆ.

ರೈಲಿನ ಚಕ್ರಕ್ಕೆ ಸಿಕ್ಕ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಗ್ನಲ್ ಸಮಸ್ಯೆಯಿಂದಾಗಿ ರೈಲು ನಿಲ್ಲಲು ಸ್ಟೇಷನ್ ಮಾಸ್ಟರ್ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಮಾರಾಟ; ಪ್ರೇಮಿಗಳ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button