
ಪ್ರಗತಿವಾಹಿನಿ ಸುದ್ದಿ: ಸಾಸಲು ರೈಲು ನಿಲ್ದಾಣದಲ್ಲಿ ನವೀಕರಣ ಕಾಮಗಾರಿಯ ಕಾರಣವಾಗಿ, ಕೆಳಕಂಡ ರೈಲು ಸೇವೆಗಳು ರದ್ದುಗೊಳಿಸಲಾಗಿದ್ದು, ಮರುಸಮಯ ನಿಗದಿಪಡಿಸಲಾಗಿದೆ:
ರದ್ದುಪಡಿಸಲಾದ ರೈಲು
ರೈಲು ಸಂಖ್ಯೆ 17347/17348 ಎಸ್‌ಎಸ್‌ಎಸ್ ಹಬ್ಬಳ್ಳಿ – ಚಿತ್ರದುರ್ಗ – ಎಸ್‌ಎಸ್‌ಎಸ್ ಹಬ್ಬಳ್ಳಿ ಎಕ್ಸ್‌ಪ್ರೆಸ್ 18.09.2025 ರಂದು (ಒಂದು ದಿನ) ರದ್ದುಪಡಿಸಲಾಗುತ್ತದೆ.
ರೈಲು ನಿಯಂತ್ರಣ / ಮರುನಿಗದಿತ
ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್, 18.09.2025 ರಂದು ಬೆಳಗಾವಿಯಿಂದ ಹೊರಡುವ ಪ್ರಯಾಣವನ್ನು 75 ನಿಮಿಷ ಮರುನಿಗದಿತ ಮಾಡಲಾಗುತ್ತದೆ ಮತ್ತು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಣ ಮಾಡಲಾಗುತ್ತದೆ.
ರೈಲು ಸಂಖ್ಯೆ 17326 ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್, 18.09.2025 ರಂದು ಮೈಸೂರಿನಿಂದ ಹೊರಡುವ ಪ್ರಯಾಣವನ್ನು ಮಾರ್ಗಮಧ್ಯೆ 130 ನಿಮಿಷಗಳ ಕಾಲ ನಿಯಂತ್ರಣ ಮಾಡಲಾಗುತ್ತದೆ.