Kannada NewsLatest

*ಹಳಿ ತಪ್ಪಿದ 500 ಪ್ರಯಾಣಿಕರಿದ್ದ ರೈಲು*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ವಿಲ್ಲುಪುರಂ ರೈಲು ನಿಲ್ದಾಣದ ಬಳಿ ಸುಮಾರು 500 ಪ್ರಯಾಣಿಕರಿದ್ದ ಪುದುಚೇರಿಗೆ ತೆರಳುತ್ತಿದ್ದ ಪ್ಯಾಸೆಂಜ‌ರ್ ರೈಲಿನ ಕನಿಷ್ಠ ಐದು ಬೋಗಿಗಳು ಹಳಿತಪ್ಪಿವೆ. 

ಲೋಕೋ ಪೈಲಟ್ ಮುನ್ನೆಚ್ಚರಿಕೆಯಿಂದ ದೊಡ್ಡ ದುರಂತ  ಸ್ವಲ್ಪದರಲ್ಲೆ ತಪ್ಪಿದೆ. ಲೋಕೋ-ಪೈಲಟ್ ದೊಡ್ಡ ಶಬ್ದ ಕೇಳಿದ ನಂತರ ರೈಲು ತಕ್ಷಣವೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ. ಸುಮಾರು 500 ಪ್ರಯಾಣಿಕರು ಈ ರೈಲಿನಲ್ಲಿದ್ದರು. ವಿಲ್ಲುಪುರಂ-ಪುದುಚೇರಿ ರೈಲು ತೆರಳುತಿತ್ತು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button