ಪ್ರಗತಿವಾಹಿನಿ ಸುದ್ದಿ: ರೈಲು ಲೆವಲ್ ಕ್ರಾಸಿಂಗ್ ಗೇಟ್ ನಂ.15ರಲ್ಲಿ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಹಲವು ರೈಲುಗಳು ಕೆಲ ದಿನಗಳ ವರೆಗೆ ರದ್ದಾಗಲಿವೆ.
ಮಾರ್ಚ್ 6ರಿಂದ 13ರ ವರೆಗೆ ಕೆಲ ರೈಲುಗಳು ರದ್ದಾಗಲಿದ್ದರೆ ಇನ್ನು ಕೆಲ ರೈಲುಗಳ ಸಂಚಾರ ವಿಳಂಬವಾಗಲಿದೆ. ಯಾವ ಭಾಗದಲ್ಲಿ ಯಾವ ರೈಲುಗಳು ರದ್ದಾಗಲಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಮಾರ್ಚ್ 6ರಿಂದ 7 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ನಡುವಿನ ಡೈಲಿ ಎಕ್ಸ್ ಪ್ರೆಸ್
ಮಾರ್ಚ್ 7 ಮತ್ತು 8 ಮೈಸೂರು-ಕೀಸ್ ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್, ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್
ಮಾರ್ಚ್ 7 ಮತ್ತು 12ರಂದು ಅರಸಿಕೆರೆ-ಮೈಸೂರು ಡೈಲಿ ಎಕ್ಸ್ ಪ್ರೆಸ್
ಮಾರ್ಚ್ 7 ಮತ್ತು 12ರಂದು ಮೈಸೂರು-ಎಸ್ ಎಂ ವಿ ಟಿ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್, ಮೈಸೂರು-ಕೆ ಎಸ್ ಆರ್ ಬೆಂಗಳೂರು ಮೆಮು ಸ್ಪೆಷಲ್ ಟ್ರೇನ್, ಎಸ್ ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಎಕ್ಸ್ ಪ್ರೆಸ್
ಮಾರ್ಚ್ 8 ಮತ್ತು 13ರಂದು ಮೈಸೂರು-ಅರಸಿಕೆರೆ ಎಕ್ಸ್ ಪ್ರೆಸ್, ಕೆ ಎಸ್ ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು, ಕೆ ಎಸ್ ಆರ್ ಬೆಂಗಳೂರು-ಚೆನ್ನಪಟ್ಟಣ ಮೆಮು ಸ್ಪೆಷಲ್ ರೈಲುಗಳು ತಾತ್ಕಾಲಿಕ ರದ್ದಾಗಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ