*ಶಿವಶಂಕರ ಜೊಲ್ಲೆ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ*
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯ ಕ್ಯಾಂಪಸ್‌ನ ಸಭಾಭವನದಲ್ಲಿ ಶಿಕ್ಷಕರಿಗಾಗಿ ಪರಿಣಾಮಕಾರಿ ಬೋಧನಾ ಪದ್ಧತಿ ಹಾಗೂ ತರಗತಿ ನಿರ್ವಹಣೆಯ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೊಲ್ಲೆ ಉದ್ಯೋಗ ಸಮೂಹದ ಸಂಸ್ಥಾಪಕರು ಹಾಗೂ ಚಿಕ್ಕೋಡಿಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಎಲ್ಲ ಸಿಬ್ಬಂದಿಯವರನ್ನು ಉದ್ದೇಶಿಸಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಪವಿತ್ರ ಸಂಬಂಧದ ಬಗ್ಗೆ ಮಾತನಾಡುತ್ತ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ತುಂಬ ಮಹತ್ವದ್ದಾಗಿದೆ. ಶಿಕ್ಷಕರ ವ್ಯಕ್ತಿತ್ವವು ವಿದ್ಯಾರ್ಥಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಸಮಾಜ ಹಾಗೂ ದೇಶಕ್ಕೆ ಸುಸಂಸ್ಕೃತ ನಾಗರಿಕರ ನಿರ್ಮಾಣ ಮಾಡುವ ಗುರುತರ ಜವಾಬದ್ದಾರಿಯನ್ನು ಶಿಕ್ಷಕರು ಹೊಂದಿದ್ದಾರೆ. ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ಕೊಡಬೇಕೆಂದು ಹೇಳಿದರು.
ಎಮ್‌ಬಿಡಿ ಗ್ರೂಪ್ ದೆಹಲಿಯ ತರಬೇತಿದಾರಾದ ಗೌರವ ಧೀಮನ ಅವರು ಪರಿಣಾಮಕಾರಿ ಬೋಧನಾ ಪದ್ಧತಿ ಹಾಗೂ ತರಗತಿ ನಿರ್ವಹಣೆಯ ಕುರಿತು ಪ್ರಾತ್ಯೇಕ್ಷಿಕೆಯ ಮೂಲಕ ವಿಷಯಗಳನ್ನು ಮನದಟ್ಟು ಮಾಡಿದರು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರು ಕೈಗೊಳ್ಳಬಹುದಾದ ಮಾರ್ಗೋಪಾಯಗಳನ್ನು ತಿಳಿಸಿದರು.
ಚಟುವಟಿಕೆಗಳ ಹಾಗೂ ಪರಿಣಾಮಕಾರಿ ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಕಲಿಕೆ ಹಾಗೂ ಶೈಕ್ಷಣಿಕ ಸಾಧನೆ ಮಾಡುವುದರ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ . ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿ ಪ್ರಸಾದ ಜೊಲ್ಲೆ, ,ಪ್ರಾಚಾರ್ಯೆ ಗೀತಾ ನಾಯ್ಡು, ಉರ್ಮಿಳಾ ಚೌಗಲೆ, ರಮಜಾನ್ ದಫೇದಾರ, ಎಮ್‌ಬಿಡಿ ಗೂಪ್ ದೆಹಲಿಯ ವೆಂಕಟೇಶ, ಮಹೇಶ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ