
ಪ್ರಗತಿವಾಹಿನಿ ಸುದ್ದಿ: ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಗೆ ಮನೆಯವರು ತೀವ್ರವಾಗಿ ವಿರೋಧಿಸಿದ್ದಕ್ಕೆ ಮನನೊಂದ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಲಬುರಗಿಯ ನಾಗನಹಳ್ಳಿ ಬಳಿ ರಒಲಿಗೆ ಸಿಇಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಕುಮಾರ್ ಸಾವಿಗೆ ಶರಣಾದ ಯುವಕ. ಸಾವಿಗೂ ಮುನ್ನ ಯುವಕ ಲಿವಿಂಗ್ ನಲ್ಲಿದ್ದ ಮಹಿಳೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದ.
ಮಹಿಳೆ ತಕ್ಷಣ ಬಂದು ಯುವಕನನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಯುವಕನನ್ನು ರಕ್ಷಿಸಲು ಮುಂದಾದ ಮಹಿಳೆಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.