ಪಡಿತರ ಚೀಟಿದಾರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಅರ್ಹ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ, ಸರ್ಕಾರವು ಜುಲೈ ೨೦೨೩ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಜೊತೆಗೆ ರಾಜ್ಯ ಸರ್ಕಾರ ಘೊಷಣೆ ಮಾಡಿದ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆರಡಿ ಪ್ರತಿ ಸದಸ್ಯರಿಗೆ ೧೦ ಕೆ.ಜಿ ಅಕ್ಕಿ ನೀಡುವ ಪ್ರಮುಖ ಯೋಜನೆ ಯಾಗಿದ್ದು ಅದರಲ್ಲಿ ಈಗಾಗಲೇ ೦೫ ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿ ಇನ್ನುಳಿದ ೦೫ ಕೆ.ಜಿ ಅಕ್ಕಿಯ ಬದಲಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಲಾಗಿದೆ.
ಜುಲೈ-೨೦೨೩ ರ ವರಗೆ ಒಟ್ಟು ೮,೨೯,೦೦೧ ಅಂತ್ಯೋದಯ ಅನ್ನಯೋಜನೆ ಮತ್ತು ಪಿ.ಎಚ್.ಎಚ್ ಪಡಿತರಚೀಟಿದಾರರ ೨೮,೧೪,೮೮೨ ಫಲಾನುಭವಿಗಳಿಗೆ ನಿಯಮಾನುಸಾರರೂ. ೪೬,೫೪,೧೮,೫೨೦/ ಗಳನ್ನು ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಮೊತ್ತಜಮೆ ಮಾಡಲಾಗಿದೆ.
ಫಲಾನುಭವಿಗಳು ಡಿ.ಬಿ.ಟಿ ಯೋಜನೆಯ ಸದುಪಯೋಗ ಪಡೆದುಕೊಂಡಿರುತ್ತಾರೆ. ಅದರಂತೆ, ಅಗಸ್ಟ ೨೦೨೩ ನೇ ಮಾಹೆ ಯಲ್ಲಿ ಆಹಾರ ಇಲಾಖೆಯ ತಂತ್ರಾಂಶದ ಪ್ರಕಾರ ಅರ್ಹ ಎ.ಎ.ವಾಯ್ ಮತ್ತು ಪಿ.ಎಚ್.ಎಚ್ ಪಡಿತರ ಚೀಟಿದಾರರ ಒಟ್ಟು ೮,೯೭,೭೪೭ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ಖಾತೆಗೆ ಆಃಖಿ ಮೂಲಕ ೫೦,೬೭,೪೯,೨೬೦ ಮೊತ್ತವನ್ನು ವರ್ಗಾಯಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ತಿಂಗಳಾಂತ್ಯಕ್ಕೆ ಒಟ್ಟು ೩೦,೭೩,೭೨೬ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊತ್ತ ಜಮೆಯಾಗಲಿದೆ, ಜಿಲ್ಲೆಯಲ್ಲಿನ ಎಲ್ಲ ಫಲಾನುಭವಿಗಳು ಇದರ ಸದುಪಯೋಗ ಪಡದುಕೊಳ್ಳಲು ಸೂಚಿಸಿದೆ.
ನೇರ ನಗದು ವರ್ಗಾವಣೆಗೆ (ಆಃಖಿ) ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ,ಮೊಬೈಲ್ ಸಂಖ್ಯೆ ಜೋಡಣೆ(e-ಏಙಅ)ಯಾಗಿರತಕ್ಕದ್ದು ಹಾಗೂ ಆ ಬ್ಯಾಂಕ್ ಖಾತೆಯು ಸಕ್ರೀಯ (ಂಛಿಣive) ಬ್ಯಾಂಕ್ ಖಾತೆಯಾಗಿರತಕ್ಕದ್ದು, ಫಲಾನುಭವಿಯು ಕಳೆದ ೦೩ ತಿಂಗಳಲ್ಲಿ ಒಂದು ಸಲ ಆದರೂ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋ ನೀಡಿ ಪಡಿತರ ಪಡೆದಿರತಕ್ಕ್ಕ್ಕದ್ದು, ಡಿಬಿಟಿ ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ರವಾನೆ ಆಗಲಿದೆ ಹಾಗೂ ಇತರೆ ವಿವರಗಳಿಗೆ ಆಹಾರ ಇಲಾಖೆಯಯು. ಆರ್.ಎಲ್ ಗೆ https://ahara.kar.nic.in/status2/status_of_dbt.aspx ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ