Kannada NewsLatestNational
*ರೈಲಿನಲ್ಲಿ ಬೆಂಕಿ ದುರಂತ; 10 ಪ್ರಯಾಣಿಕರು ಸಜೀವದಹನ*

ಪ್ರಗತಿವಾಹಿನಿ ಸುದ್ದಿ; ಮುಧುರೈ: ಭಾರತ್ ಗೌರವ್ ವಿಶೇಷ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿ, 10 ಪ್ರಯಾಣಿಕರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಧುರೈನಲ್ಲಿ ನಡೆದಿದೆ.
ತಮಿಳುನಾಡಿನ ಮಧುರೈನಲ್ಲಿ ನಿಲ್ಲಿಸಿದ್ದ ಭಾರತ್ ಗೌರವ್ ಸ್ಪೆಷಲ್ ಟ್ರೇನ್
ಬೆಂಕಿ ಅವಘಡ ಸಂಭವಿಸಿದ್ದು, ಇದ್ದಕ್ಕಿದ್ದಂತೆಯೇ ರೈಲಿನ ಬೋಗಿಗಳು ಹೊತ್ತಿ ಉರಿದಿವೆ. 10 ಪ್ರಯಾಣಿಕರು ಸಜೀವದಹನಗೊಂಡಿದ್ದಾರೆ. ರೈಲು ತಿರುಪತಿ-ರಾಮೇಶ್ವರಂ-ಕನ್ಯಾಕುಮಾರಿಗೆ ತೆರಳುತ್ತಿತ್ತು. ದುರಂತದಲ್ಲಿ ಸಾವನ್ನಪ್ಪಿದವರು ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ರೈಲಿನಲ್ಲಿದ್ದ ಯಾತ್ರಾರ್ಥಿಗಳು ಗ್ಯಾಸ್ ಸಿಲಿಂಡರ್ ಬಳಸಿ ಅದುಗೆ ಮಾಡುತ್ತಿದ್ದರು. ಗ್ಯಾಸ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ. ದುರಂತ ಸಂಭವಿಸಿದಾಗ ರೈಲು ಮಧುರೈನಲ್ಲಿ ನಿಂತಿತ್ತು. 10 ಜನರು ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




