Kannada NewsKarnataka News

ಹಲವು ಶಿಕ್ಷಣಾಧಿಕಾರಿಗಳ ವರ್ಗಾವಣೆ: ಬೆಳಗಾವಿಗೆ ಪುಂಡಲಿಕ್ ಡಿಡಿಪಿಐ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಲವು ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಳಗಾವಿ ಡಿಡಿಪಿಐ ಆಗಿ ಎ.ಬಿ.ಪುಂಡಲಿಕ್ ಅವರನ್ನು ನೇಮಿಸಲಾಗಿದೆ. ಮಂಡ್ಯಕ್ಕೆ ಶಿವರಾಮೇಗೌಡ, ವಿಜಯಪುರಕ್ಕೆ ಎನ್.ಎಚ್. ನಾಗೂರ್, ಬಾಗಲಕೋಟೆಗೆ ದೊಡ್ಡಬಸಪ್ಪ ನೇರಳೆಕರ್, ಹಾಸನಕ್ಕೆ ಜವರೇಗೌಡ ಅವರನ್ನು ಡಿಡಿಪಿಐ ಆಗಿ ವರ್ಗಾಯಿಸಲಾಗಿದೆ. ಯುವರಾಜ ನಾಯಕ ಧಾರವಾಡ ಡಯೆಟ್ ಪ್ರಾಚಾರ್ಯರಾಗಿ ನೇಮಕವಾಗಿದ್ದಾರೆ.

ಹಲವು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಕ್ಷೇತ್ರಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಅವರನ್ನು ಖಾನಾಪುರಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ವಿದ್ಯಾ ಕುಂದರಗಿ ಅವರನ್ನು ನೇಮಿಸಲಾಗಿದೆ. ಮಹಾದೇವಿ ಅಪ್ಪಾಜಿ ನಿಪ್ಪಾಣಿಗೆ, ಆದಾಪುರ ರಾಮಣ್ಣ ಸಂಗಪ್ಪ ಬೀಳಗಿ, ಇಮಾಮ ಸಾಬ ಅಕ್ಕಿ ಸಂಡೂರು, ರವೀಂದ್ರ ಬಳಿಗಾರ ಬೆಳಗಾವಿ ಡಿಡಿಪಿಐ ಕಚೇರಿ, ಎಂ.ಮಂಜುಳಾ ಕೊಳ್ಳೆಗಾಲ, ಜೇಮ್ಸ್ ಕುಟಿನೋ ಮಂಗಳೂರು ಉತ್ತರ, ಡಾ.ಸೂರ್ಯ ಕಲಂ ತುಮಕೂರು ವಲಯ, ಭರತ್ ರಾಜ್ ಸಾವಳಗಿ ಆಳಂದ, ಎಂ.ಪ್ರಕಾಶ ವಿರಾಜಪೇಟೆ, ಚಂದ್ರ ಪಾಟೀಲ ಮಳವಳ್ಳಿ, ಬಿ.ಚಂದ್ರಶೇಖರ ಪಾಂಡವಪುರ, ವಿವೇಕಾನಂದ ಎಂ ಮೈಸೂರು ಗ್ರಾಮೀಣ, ಶೋಭಾ ಜೆ ಟಿ.ನರಸೀಪುರ, ಶ್ರೀನಿವಾಸ ಮೈಸೂರು ವಯಸ್ಕರ ಶಿಕ್ಷಣಾಧಿಕಾರಿ, ಗಣೇಶ ವೈ ತೀರ್ಥಹಳ್ಳಿ, ಕೆ.ಎನ್.ಹನುಮಂತರಾಯಪ್ಪ ಮಧುಗಿರಿ, ವಿಜಯಕುಮಾರ ಸಿ ಪಾವಗಡ, ಗಣಪತಿ ನಾಯ್ಕ ಸಿದ್ದಾಪುರ, ಬಿ.ಎನ್.ನಾಗೇಂದ್ರ ಚಾಮರಾಜ ನಗರ ಸಮಗ್ರ ಶಿಕ್ಷಣ ಸಮನ್ವಯಾಧಿಕಾರಿ, ಶಂಕರಪ್ಪ ದೇಶಮುಖ ಬಸವಕಲ್ಯಾಣ, ಭಗವಂತ ಮೇಕನಮರಡಿ ಚಿಕ್ಕೋಡಿ, ಸೈಯದ್ ಮಯಿಸಿನ್ ಹೊಸದುರ್ಗ, ಮೊಹ್ಮದ್ ಸೊರಬ್ ಡಯೆಟ್ ದಾವಣಗೆರೆ, ಸುಜಾತಾ ತಿಮ್ಮಾಪುರ ಧಾರವಾಡ ಗ್ರಾಮೀಣ, ಅಶೋಕ ಸಿಂದಗಿ ಧಾರವಾಡ ನಗರ, ಎ.ಎ.ಖಾಜಿ ಕಲಘಟಗಿ, ವೀರಯ್ಯ ಸಾಲಿಮಠ ಹಾನಗಲ್, ಉಮಾದೇವಿ ಬಸಾಪುರ ಹುಬ್ಬಳ್ಳಿ ಗ್ರಾಮೀಣ, ಎಚ್.ಶೋಭಾ ಶೆಟ್ಟಿ ಕುಂದಾಪುರ, ಈಶ್ವರಪ್ಪ ನಿರಡಗಿ ಯಾದಗಿರಿ ಉತ್ತರ, ಮಹಾದೇವ ಮಂಡ್ಯ ದಕ್ಷಿಣ, ಸುವರ್ಣ ಕುರಂದವಾಡ ಡಯೆಟ್ ಶಿವಮೊಗ್ಗ, ಸತ್ಯನಾರಾಯಣ ಸೊರಬ, ನಾಗರಾಜ ನಾಯ್ಕ ಶಿರಸಿ, ಪ್ರಭಯ್ಯ ಚಿಕ್ಕಮಠ ಹುಬ್ಬಳ್ಳಿ ನಗರ, ಎಸ್.ಸಿ.ಶಿವಮೂರ್ತಿ ಕೆ.ಆರ್.ನಗರ, ಜಯಪ್ರಕಾಶ ಶಿಕ್ಷಕರ ಸದನ ಬೆಂಗಳೂರು, ಆರ್.ಪಿ.ಜುಟ್ಟನವರ್ ಕಿತ್ತೂರು ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button