Kannada NewsLatest

ತುರ್ತು ಸಂದರ್ಭಕ್ಕೆ ಕೆಎಸ್ಆರ್ ಟಿಸಿ ಸಂಪರ್ಕ

ತುರ್ತು ಸಂದರ್ಭಕ್ಕೆ ಕೆಎಸ್ಆರ್ ಟಿಸಿ ಸಂಪರ್ಕ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ವ್ಯಾಪ್ತಿಯಲ್ಲಿ ಅಗಸ್ಟ್ 1 ರಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆರೆಹಾವಳಿ ಉಂಟಾಗಿ ಅತೀವೃಷ್ಟಿಯಾಗುತ್ತಿದೆ.

ಇದರಿಂದಾಗಿ ಖಾನಾಪುರ ತಾಲೂಕು, ಗೋವಾ, ಕೋಲ್ಲಾಪುರ, ವಿಜಯಪುರ, ಗೋಕಾಕ, ಹಿಡಕಲ್, ಪಾಶ್ಚಾಪುರ, ಧಾರವಾಡ, ಹುಬ್ಬಳ್ಳಿ ಹಾಗೂ ಬೆಳಗಾವಿ ಉಪನಗರ ವ್ಯಾಪ್ತಿಯ ಹೆಚ್ಚಿನ ಪ್ರಮಾಣದಲ್ಲಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ. ಹಾಗೂ ಇದರಿಂದ ಕೆಲಕಡೆ ಭೂಕುಸಿತ ಉಂಟಾಗಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಗಸೂಚಿಗಳನ್ನು ಸ್ಥಗಿತಗೊಳಿಸಲಾಗಿದೆ.

ಹಾಗೂ ಪರಿಸ್ಥಿತಿಗನುಗುಣವಾಗಿ ರಸ್ತೆ ಸಂಪರ್ಕ ಹೊಂದಿರುವ ಮಾರ್ಗಗಳಲ್ಲಿ ವಾಹನಗಳನ್ನು ಕಾರ್ಯಾಚರಣೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ಬೆಳಗಾವಿ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು.

ಸದರಿ ಕ್ರಮಗಳನ್ನು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಕೈಗೊಳ್ಳಲಾಗುತ್ತಿದ್ದು, ಸದರಿ ನೆರೆಹಾವಳಿ ಭೀತಿ ಕಡಿಮೆ ಆಗುವವರೆಗೆ ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು.

ಮುಂದುವರೆದು ತುರ್ತು ಪರಿಸ್ಥಿತಿಗಳಲ್ಲಿ ಸಂಸ್ಥೆಯ ದೂರವಾಣಿ ಸಂಖ್ಯೆ-7760991612 (ಕೇ.ಬ.ನಿ ವಿಚಾರಣೆ), 7760991613 ನಿಲ್ದಾಣ ಮೇಲ್ವಿಚಾರಕರು, 7760991642 ನಗರ ಸಾರಿಗೆ ಬಸ್ ನಿಲ್ದಾಣ, 7760991635 ರಿಜರ್ವೇಷನ್ ಕೌಂಟರ್ ಇವುಗಳಿಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button