Kannada NewsKarnataka NewsLatest

*ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಾಪತ್ತೆಯಾಗಿದ್ದ ಯುವತಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ಕೊ‌ನೆಗೂ ಪತ್ತೆ ಆಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಅವರಿಗಾಗಿ ನಡೆಸುದ ಹುಡುಕಾಟ, ಕಾರ್ಯಾಚರಣೆ ಯಶಸ್ವಿಯಾಗಿದ್ದು, ಯುವತಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.ಈ ಮೂಲಕ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಚಾರಣಕ್ಕೆ ಹೋದಾಗ ದಾರಿ ತಪ್ಪಿದ ಶರಣ್ಯ, ರಸ್ತೆ ಮಾರ್ಗ ಗೊತ್ತಾಗದೇ ಪಾಳು ಬಿದ್ದ ಬಂಗಲೆಯೊಂದರಲ್ಲೇಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ.

Home add -Advt

ಕೇರಳದಿಂದ ಕೊಡಗು ಜಿಲ್ಲೆಯ ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕಾಗಿ ಬಂದಿದ್ದರು. ಏಪ್ರಿಲ್ ೨ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಯುವತಿ ಶರಣ್ಯ ಇದೀಗ ಪತ್ತೆಯಾಗಿದ್ದಾರೆ. ಸದ್ಯ ಯುವತಿಯನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಾರಿ ತಪ್ಪಿ ಕಾಡಿನಲ್ಲಿ ಕಳೆದುಹೋಗಿದ್ದ ಶರಣ್ಯಗಾಗಿ ಬುಡಕಟ್ಟು ಜನಾಂಗದ ಜೊತೆ ಅರಣ್ಯ ಸಿಬ್ಬಂದಿ 4 ದಿನದಿಂದ ನಿರಂತರ ಹುಡುಕಾಟ ನಡೆಸಿದ್ದರು.

ಯುವತಿ ಶರಣ್ಯ ಕಾಡಿನಲ್ಲಿ ನಡೆದು ನಡೆದು ಪಾಳುಬಿದ್ದ ಬಂಗಲೆ ಸೇರಿದ್ದರು. ರಸ್ತೆ ಅರಿವಾಗದೆ ಅಲ್ಲೇ ಉಳಿದಿದ್ದರು. ಏಪ್ರಿಲ್ 2ರಿಂದ ಕಾಡಿನಲ್ಲಿ ಅಲೆದು ನಿತ್ರಾಣಗೊಂಡಿದ್ದ ಶರಣ್ಯರನ್ನು ಸದ್ಯ ರಕ್ಷಣೆ ಮಾಡಲಾಗಿದೆ.

ಶರಣ್ಯ ಕೇರಳದ ಕೋಯಿಕ್ಕೋಡ್ ನಿವಾಸಿ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿ. ಗುರುವಾರ ಬೆಳಗ್ಗೆ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದಕ್ಕೆ ಆಗಮಿಸಿದ್ದ ಈಕೆ ಬೆಳಗ್ಗೆ 8.30ರ ಸುಮಾರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವ ಅರಣ್ಯ ಇಲಾಖೆಯ ಚೆಕ್​ಪೋಸ್ಟ್​ಗೆ ಆಗಮಿಸಿದ್ದಾಳೆ. ಆದರೆ ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡುವುದಿಲ್ಲವಾದ್ದರಿಂದ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನ ಕಳುಹಿಸಲಾಗಿತ್ತು.

ಮಧ್ಯಾಹ್ನ 1.30ರ ಸುಮಾರಿಗೆ ಈಕೆ ಇದೇ ಚೆಕ್​ ಪೋಸ್ಟ್​ ಬಳಿಗೆ ಹಿಂದಿರುಗಬೇಕಿತ್ತು. ಈಕೆಯನ್ನ ಕರೆತರಲೆಂದು ಹೋಮಸ್ಟೇ ಮಾಲಿಕ ನಂದ ತಮ್ಮ ಸ್ಕೂಟಿಯಲ್ಲಿ ಇಲ್ಲಿಗೆ ಬಂದು ಕರೆ ಮಾಡಿದಾಗ ನಾಟ್ ರೀಚೇಬಲ್ ಬಂದಿದೆ. ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಳು. ಸಿಬ್ಬಂದಿ ಕಾರ್ಯಾಚರಣೇ ನಡೆಸಿದರೂ ಸುಳಿವೇ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ 40ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯರು ಸೇರಿ ಮತ್ತೆ ಕಾರ್ಯಾಚರಣೆ ಮಾಡಿದ್ದರು. ಶ್ವಾನ ದಳವನ್ನೂ ಕರೆಸಿ ಬೆಟ್ಟದ ಮೇಲೆ ಆಕೆ ಎಲ್ಲಿ ನಾಪತ್ತೆಯಾಗಿದ್ದ ಸ್ಥಳದಲ್ಲೆಲ್ಲಾ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶರಣ್ಯ ಸುರಕ್ಷಿತವಾಗಿ‌ ಮರಳಿ ಬರಲೆಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ‌ ತಮ್ಮಚ್ಚ ದೇವರಿಗೆ ಹರಕೆ ಕೂಡ ಹೊತ್ತಿದ್ದರು. ಕೊನೆಗೂ ಶೋಧ ಕಾರ್ಯ ಯಶಸ್ವಿಯಾಗಿದ್ದು, ಯುವತಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.


Related Articles

Back to top button