
ಪ್ರಗತಿ ವಾಹಿನಿ ಸುದ್ದಿ ಮುಂಬೈ
ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ಕಾವೇರುತ್ತಿವೆ. ಸಿಕ್ಸ್‌ರ್ ಬೌಂಡರಿಗಳು ಸುರಿಮಳೆ ಒಂದೆಡೆಯಾದರೆ ಕಪ್ ಗೆಲ್ಲುವ ಲೆಕ್ಕಾಚಾರದಲ್ಲಿ ವಿವಿಧ ತಂಡಗಳ ಅಭಿಮಾನಿಗಳು , ಕ್ರಿಕೇಟ್ ಪ್ರಿಯರು ಮುಳುಗಿದ್ದಾರೆ. ಈ ನಡುವೆ ಗುಜರಾತ್ ಜಯಿಂಟ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸದ್ದಿಲ್ಲದೆ ಹೊಸ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಪ್ರಸ್ತುತ ಐಪಿಎಲ್ ಇತಿಹಾದಲ್ಲೇ ಅತೀ ವೇಗವಾಗಿ ೧೦೦ ಸಿಕ್ಸರ್‌ಗಳನ್ನು ಹೊಡೆದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸೋಮವಾರ ಎಸ್‌ಆರ್‌ಎಚ್ ತಂಡದ ಎದುರು ನಡೆದ ಪಂದ್ಯದಲ್ಲಿ ಏಯ್ಡನ್ ಮಾರ್ಕರಮ್ ಅವರ ಬಾಲ್‌ಗೆ ಸಿಕ್ಸರ್ ಸಿಡಿಸುವ ಮೂಲಕ ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದರು. ೧೦೦ ಸಿಕ್ಸರ್‌ಗಳನ್ನು ಅವರು ಒಟ್ಟು ೧೦೪೬ ಬಾಲ್‌ಗಳನ್ನು ಎದುರಿಸಿದ್ದಾರೆ.
ಇದಕ್ಕೂ ಮೊದಲು ಈ ದಾಖಲೆ ಡಿಸಿ ತಂಡದ ನಾಯಕ ರಿಷಬ್ ಪಂತ್ ಅವರ ಹೆಸರಲ್ಲಿತ್ತು. ರಿಷಬ್ ಪಂತ್ ಒಟ್ಟು ೧೨೨೪ ಬಾಲ್‌ಗಳಲ್ಲಿ ೧೦೦ ಸಿಕ್ಸರ್ ಸಿಡಿಸಿದ್ದರು.
ಸ್ವಯಂ ಔಟ್ (ರಿಟಾಯರ್ ಔಟ್) ಘೋಷಿಸಿಕೊಂಡ ಕುರಿತು ಮೌನ ಮುರಿದ ಆರ್. ಅಶ್ವಿನ್