Latest

ಸತ್ಯ ಸ್ವಾತಂತ್ರ್ಯ

ವಿಶ್ವಾಸ ಸೋಹೋನಿ
ಭಾರತ ದೇಶ 1947 ಅಗಸ್ಟ್ 15 ರಂದು ಸ್ವತಂತ್ರವಾಗಿ ಇಂದು 73 ವರ್ಷಗಳು ಸಂದಿವೆ. ಇದನ್ನು ಪಡೆಯಲು ಹೋರಾಡಿದ, ತಾತ್ಯಾ ಟೋಪೆ, ವೀರ ಸಾವರ್ಕರ್, ಸುಭಾಷ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಭಗತಸಿಂಗ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮುಂತಾದ ಅನೇಕ ಗಣ್ಯರನ್ನು ಸ್ಮರಿಸಲಾಗುತ್ತದೆ. ನಮ್ಮ ಸಂವಿಧಾನದ ಪ್ರಕಾರ ನಮಗೆ ವಿಚಾರ ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವಿದೆ.
ಸ್ವತಂತ್ರವಾಗಿರಲು ಯಾರು ಇಷ್ಟಪಡುವುದಿಲ್ಲ? ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ತಾನು ಸ್ವತಂತ್ರವಾಗಿ ಇರಬೇಕು ಮತ್ತು ಸ್ವತಂತ್ರವಾಗಿ ಬಾಳಬೇಕೆಂದು ಬಯಸುತ್ತಾರೆ. ಮೃಗಾಲಯದ ಪ್ರಾಣಿಗಳಿಗೆ, ಪಂಜರದ ಪಕ್ಷಿಗೆ, ಬಲೆಯಲ್ಲಿ ಸಿಕ್ಕಿರುವ ಮೀನುಗಳಿಗೆ, ಜೈಲುಗಳಲ್ಲಿರುವ ಕೈದಿಗಳಿಗೆ ತಾವುಗಳು ಮುಕ್ತರಾಗಬೇಕೆಂಬ ಹಂಬಲವಿರುತ್ತದೆ. ಮಾನವನ ಮನಸ್ಸು ಸ್ವತಂತ್ರವಾಗಿ ನೀಲಿ ಆಕಾಶದಲ್ಲಿ ಹಕ್ಕಿಯಂತೆ ಹಾರುತ್ತಿರಬೇಕೆಂದು ಬಯಸುತ್ತದೆ. ಮನುಷ್ಯನು ಯಾವುದೇ ಭಯ, ಚಿಂತೆ, ಒತ್ತಡ, ಕಾಯಿಲೆ, ಸಮಸ್ಯೆಗಳಿಗೆ ವಶನಾಗದೇ ನಿರ್ಭಯರಾಗಿರಬೇಕೆಂದು ಬಯಸುತ್ತಾನೆ.
ಈಶ್ವರೀಯ ವಿಶ್ವವಿದ್ಯಾಲಯ ತತ್ವಜ್ಞಾನದ ಪ್ರಕಾರ ಮತ್ತು ಭಗವಂತನ ಜ್ಞಾನದ ಆಧಾರದಿಂದ ಸರ್ವಾಂಗೀಣ  ಸ್ವಾತಂತ್ರ್ಯವನ್ನು 6 ವಿಭಾಗದಲ್ಲಿ ವಿಂಗಡಿಸಬಹುದು.
1. ಶಾರೀರಿಕ ಸ್ವಾತಂತ್ರ್ಯ : ಮಾನವ ಯಾವುದಾದರೂ ಕಾಯಿಲೆ, ದೈಹಿಕ ನ್ಯೂನ್ಯತೆ ಮತ್ತು ಅಪಘಾತಗಳಿಗೆ ತುತ್ತಾಗುತ್ತಾನೆ. ವೃದ್ಧಾವಸ್ಥೆಯನ್ನು ತಲುಪಿದಾಗ ಅನೇಕ ಶಾರೀರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವನು ರೋಗಗಳಿಂದ ಮುಕ್ತನಾಗಲು ತನ್ನ ಹಣವನ್ನು ನೀರಿನಂತೆ  ಖರ್ಚು ಮಾಡಲು ತಯಾರಾಗುತ್ತಾನೆ. ಶರೀರ ಸದೃಢವಾಗಿರದಿದ್ದರೆ ಅವನ ಜೀವನ ನೀರಸವೆನಿಸುತ್ತದೆ.
2. ಆರ್ಥಿಕ ಸ್ವಾತಂತ್ರ್ಯ : ಮಾನವ  ಹಣದ ಕೊರತೆಯಿಂದ ಪ್ರಭಾವಿತನಾಗಿ ಕಳ್ಳತನ, ದರೋಡೆ, ಮೋಸ, ವಂಚನೆ, ಮಾಡಲು ಪ್ರಾರಂಭಿಸುತ್ತಾನೆ. ಅವನಿಗೆ ಜೀವನ ಸಾಗಿಸಲು ಸಾಕಷ್ಟು ಸಂಪತ್ತು ಇರಬೇಕು.
3. ಮಾನಸಿಕ ಸ್ವಾತಂತ್ರ್ಯ : ಆರೋಗ್ಯ ಸರಿಯಿದ್ದರೂ ಸಂಪತ್ತಿನ ಕೊರತೆಯಿದ್ದರೆ ಅವನಿಗೆ ಚಿಂತೆ ಕಾಡುತ್ತ್ತಿರುತ್ತದೆ. ಆಗ ಅವನು ಸುಖಿಯಾಗಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಅಪಘಾತ, ಸಂಕಟದ ಭಯವಿದ್ದರೆ ಅವನ ಜೀವನ ದು:ಖಿಯಾಗುತ್ತದೆ.
4. ಸಂಬಂಧದ ಸ್ವಾತಂತ್ರ್ಯ:  ಅನೇಕ ಸಂಬಂಧಗಳು ಮಾನವನಿಗೆ ದು:ಖವನ್ನು ನೀಡುತ್ತವೆ. ತಂದೆ ತಾಯಿಯ ಆಸೆಗಳು, ಮಕ್ಕಳ ಕಾಟ, ಪತ್ನಿಯ ಬೇಡಿಕೆಗಳು, ಅಧಿಕಾರಿಯ ಸೂಚನೆಗಳು ಅವನಿಗೆ ಚಿಂತೆಯ ವಿಷಯವಾಗಿರುತ್ತವ ಸಂಬಂಧಗಳಲ್ಲಿ ಪ್ರೀತಿ, ಸ್ನೇಹ ಸಹಯೋಗವಿದ್ದರೆ ಜೀವನ ಸುಖಮಯವಾಗಿರುತ್ತದೆ.
5. ಪ್ರಕೃತಿಯ ಸ್ವಾತಂತ್ರ್ಯ : ನಿರೋಗಿ ಕಾಯ, ಸಂಪತ್ತು, ಸಂಬಂಧಗಳ ಸುಖ, ಮಾನಸಿಕ ಅರೋಗ್ಯ ಎಲ್ಲವೂ ಇದ್ದು, ಪ್ರಕೃತಿಯ ವಿಕೋಪವಿದ್ದರೆ ಅವನ ಜೀವನ ಸಂಕಟಮಯವಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ಮಂಗನ ಕಾಯಿಲೆ, ಕರೊನಾ ಪೆಡಂಭೂತದ ಕಾಟ, ಬಿಸಿಲು, ಚಳಿಯಿಂದ ಮಾನವ ಪರಿತಪಿಸುತ್ತಿದ್ದಾನೆ.
6. ರಾಜಕೀಯ ಸ್ವಾತಂತ್ರ್ಯ : ನಮ್ಮ ದೇಶ ಸಾವಿರಾರು ವರ್ಷಗಳಿಂದ ಪರತಂತ್ರವಾಗಿತ್ತು.  ರಾಜಕೀಯ ಸ್ವಾತಂತ್ರ್ಯಕ್ಕೆ ಬಹಳ ಮಹತ್ವವಿದೆ. ದೇಶ ರಕ್ಷಣೆಗಾಗಿ ಮಿಲಿಟರಿ ಇರುತ್ತದೆ. ಶತ್ರು ದೇಶಗಳ ಆಕ್ರಮಣದ ಚಿಂತೆ ಸದಾ ಇರುತ್ತದೆ.
ಸ್ವಾತಂತ್ರ್ಯತೆ ಮತ್ತು ಸ್ವಚ್ಛಂದತೆಯಲ್ಲಿ ಅಂತರವಿದೆ. ಆದರೆ ಇಂದು ಮಾನವ ತನ್ನ ದುರ್ಬಲತೆಗಳಿಂದಾಗಿ ಸ್ವಾತಂತ್ರ್ಯದ ಯಥಾರ್ಥವನ್ನು ತಿಳಿದುಕೊಳ್ಳದೇ, ಕಾಮ, ಕೋಧ, ಲೋಭ, ಮೋಹ, ಅಹಂಕಾರ ಮುಂತಾದ ವಿಕಾರಗಳಿಗೆ ವಶನಾಗಿ ಸ್ವಚ್ಛಂದ ಜೀವನಕ್ಕೆ ದಾಸನಾಗಿದ್ದಾನೆ. ಆದ್ದರಿಂದಲೇ ಮಾನವ ದು:ಖ, ಅಶಾಂತಿ, ಭಯ, ರೋಗ, ಚಿಂತೆ, ಪ್ರ್ರಾಕೃತಿಕ ವಿಕೋಪಗಳು ಮತ್ತು ಇತರೆ ಸಮಸ್ಯೆಗಳ ಭವಸಾಗರದಲ್ಲಿ ಮುಳುಗಿದ್ದಾನೆ.
ಬನ್ನಿ, ಈ ಸ್ವಾತಂತ್ರ್ಯ ದಿನಾಚರಣೆಯಂದು ನಾವೆಲ್ಲಾ ವಿಕಾರಗಳಿಂದ ಮುಕ್ತರಾಗಲು ರಾಜಯೋಗವನ್ನು ಕಲಿಯೋಣ. ಭಗವಂತನ ಆದೇಶದಂತೆ ನಡೆದು ರಾಮರಾಜ್ಯ ಸ್ಥಾಪನೆಗೆ ಅವನಿಗೆ ಸಹಾಯ ಮಾಡೋಣ.
“ ಜಹಾ ಡಾಲ ಡಾಲ ಪರ ಸೊನೆ ಕಿ ಚಿಡಿಯಾ ಕರತಿ ಹೈ ಬಸೇರಾ ವೊ ಭಾರತ ದೇಶ ಹೈ ಮೇರಾ ವೊ ಭಾರತ ದೇಶ ಹೈ ಮೇರಾ ”

Related Articles

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button