Kannada NewsKarnataka News
ಟಿಟಿ: ಥೈಲ್ಯಾಂಡ್ ಓಪನ್ನಲ್ಲಿ ಸಂಜೀವ್ ಗೆ ಬೆಳ್ಳಿ ಪದಕ

ಟಿಟಿ: ಥೈಲ್ಯಾಂಡ್ ಓಪನ್ನಲ್ಲಿ ಸಂಜೀವ ಗೆ ಬೆಳ್ಳಿ ಪದಕ
ಪ್ರಗತಿವಾಹಿನಿ ಸುದ್ದಿ –
ಬೆಳಗಾವಿಯ ಸಂಜೀವ ಹಮ್ಮಣ್ಣವರ ಇವರು ಥೈಲ್ಯಾಂಡ್ನ, ಬ್ಯಾಂಕಾಕ್ ನಲ್ಲಿ ಜರುಗಿದ ೨೦೧೯ ಐಟಿಟಿಫ್ ಪ್ಯಾರಾ ಬ್ಯಾಂಕಾಕ್ ಓಪನ್ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಪಡಿದ್ದಾರೆ.
ಪ್ರಚಲಿತ ರಾಷ್ಟ್ರೀಯ ಪ್ಯಾರಾ ಟೇಬಲ್ ಟೆನ್ನಿಸ್ ಚಾಂಪಿಯನ್ ನಲ್ಲಿ ಸಂಜೀವ, ಥೈಲ್ಯಾಂಡ್ನ ರುಂಗರಾಜ್ ಮತ್ತು ಪುನ್ಪು ಸೇರಿದ ತಂಡ ಲೀಗ್ ಹಂತದಲ್ಲಿ ಗ್ರೇಟ್ ಬ್ರಿಟಿನ್ ತಂಡಕ್ಕೆ ೨:೦, ಗ್ರೀಸ್ ತಂಡಕ್ಕೆ ೨:೦, ಸೆಟ್ನಿಂದ ಗೆಲುವು ಪಡೆದು ಅವರ ಗ್ರೂಪ್ನಲ್ಲಿ ಮೊದಲ ಸ್ಥಾನ ಪಡೆದಿದ್ದರಿಂದ ಅಂತಿಮ ಹಂತಕ್ಕೆ ತಲುಪಿದರು.
ಅಂತಿಮ ಪಂದ್ಯ ಪೀಪಲ್ಸ್ ರಿಪಬ್ಲಿಕ್ ಆಪ್ ಕೋರಿಯಾ ತಂಡದೊಂದಿಗೆ ೨:೦, ದಿಂದ ಪರಾಭವಗೊಂಡು ಬೆಳ್ಳಿ ಪದಕ ಪಡೆದರು. ಸಂಜೀವ ಹಮ್ಮಣ್ಣವರ ಇವರು ಕೆಪಿಟಿಸಿಎಲ್ ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದು, ಇತ್ತೀಚಿಗೆ ಚೀನಾದ ಥೈಪೆಯಲ್ಲಿ ಜುಲೈ ೨೩ ರಿಂದ ೨೭ ರ ವರೆಗೆ ಜರುಗಿದ ಏಶಿಯನ್ ಚಾಂಪಿಯನ್ಲ್ಲೂ ಭಾರತ ದೇಶವನ್ನು ಪ್ರತಿನಿಧಿಸಿದ್ದರು.



