ಪ್ರಗತಿವಾಹಿನಿ ಸುದ್ದಿ, ಹೊಸೂರ (ಸವದತ್ತಿ) : ಗ್ರಾಮದ ಅನುದಾನಿತ ಪ್ರೌಢಶಾಲಾ ವಿಶ್ರಾಂತ ಮುಖ್ಯೋಪಾಧ್ಯಾಯ ಮಡಿವಾಳಪ್ಪ ಗೂಳಪ್ಪ ತುಕ್ಕಣ್ಣವರ ವಯೋಸಹಜ ಕಾಯಿಲೆಯಿಂದ ತಮ್ಮ 78ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು.
ಮೃತರಿಗೆ ಪತ್ನಿ, ನಾಲ್ಕು ಜನ ಗಂಡು ಮಕ್ಕಳು, ಅಪಾರ ಬಂಧು ಬಳಗ ಹಾಗೂ ಶಿಷ್ಯವರ್ಗ ಇದ್ದಾರೆ.
ಗ್ರಾಮದಲ್ಲಿ ಜನಿಸಿ ಬಿಎಸ್ಸಿ.ಬಿ.ಈಡಿ ಪದವಿದರರಾಗಿ ಅಪ್ಪಟ ಗಾಂಧಿವಾದಿ ದಿ.ನೀಲಕಂಠಜಿ ಗಣಾಚಾರಿಯವರು ಸ್ವಗ್ರಾಮದಲ್ಲಿ ಸ್ಥಾಪಿಸಿದ ಗ್ರಾಮ ಸ್ವರಾಜ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಗ್ರಾಮದಲ್ಲಿ ತುಕ್ಕಣ್ಣವರ ಮಾಸ್ತರರು ಎಂದೆ ಚಿರಪರಿಚಿತರಾಗಿದ್ದರು.
ಸರಳ ಸಜ್ಜನ ಸ್ವಾಭಿಮಾನದ ಶಿಸ್ತು ಬದ್ದ ಶಿಕ್ಷಣ ನೀಡಿದ ಮೇಧಾವಿಗಳು. ಅತ್ಯಂತ ಸರಳ ಭಾಷೆಯಲ್ಲಿ ಭೋಧನೆ ಮಾಡುತ್ತಿದ್ದ ಇವರ ಪ್ರಭಾವಕ್ಕೆ ಒಳಗಾಗಿ ಗ್ರಾಮದಲ್ಲಿ ಅತಿ ಹೆಚ್ಚಿನ ವಿಜ್ಞಾನ ಪದವಿದರರು ಈ ಗ್ರಾಮದಲ್ಲಿ ಸಿಗುತ್ತಾರೆ. ಸಾಮಾಜಿಕ ಜೀವನದೊಂದಿಗೆ ಬೇರೆತು ವಿದ್ಯಾರ್ಥಿಗಳಲ್ಲಿ ಕಲೆ ಹಾಗೂ ಸಾಹಿತ್ಯಾಸಕ್ತಿ ಬೆಳಿಸಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಪರಿಕಲ್ಪನೆ ಮೂಡಿಸಿದ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗೈಯದ ಮೇದಾವಿಗಳು. ಇವರ ನಿಧನದ ಸುದ್ದಿ ತಿಳಿದ ಸಾವಿರಾರು ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.
ಸಂತಾಪ: ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಸಿ.ಎಸ್.ಸಾಧುನವರ, ಕಾರ್ಯದರ್ಶಿ ಎಸ್.ಎಸ್.ಶಿದ್ನಾಳ, ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ಮಲಪ್ರಭಾ ಪಿಕೆಪಿಎಸ್ ಅಧ್ಯಕ್ಷ ಸಿ.ವಾಯ್.ಬೂದಿಹಾಳ ವಿವಿದೊದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷ ಸೋಮಲಿಂಗ ಚಳಕೊಪ್ಪ, ಶಿಕ್ಷಕ ಜಿ.ಎಸ್.ಬೋಳೆತ್ತಿನ, ಈರಣ್ಣ ಬೇಂಡಿಗೇರಿ, ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಹಾಗೂ ಅಪಾರ ಶಿಷ್ಯವರ್ಗ ಇಂತಹ ಶಿಕ್ಷಕರನ್ನು ಕಳೆದುಕೊಂಡು ಶಿಕ್ಷಣ ಕ್ಷೇತ್ರ ಬಡವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ