Uncategorized

*ಸಭೆಯಲ್ಲಿ ಮಾತನಾಡುತ್ತಲೇ ತಲೆಸುತ್ತಿ ಕೆಳಗೆ ಬಿದ್ದ ಅಧಿಕಾರಿ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಕೆಡಿಪಿ ಸಭೆಯಲ್ಲಿ ತಲೆಸುತ್ತಿ ಬಂದು ಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದ್ದು, ಸಭೆಯಲ್ಲಿ ಇಲಾಖೆ ಬಗ್ಗೆ ಚರ್ಚಿಸಲು ಎದ್ದುನಿಂತು ವಿವರಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶ ಶ್ರೀಧರ್ ಎಂಬುವವರು ಇದ್ದಕ್ಕಿದ್ದಂತೆ ತಲೆಸುತ್ತಿ ಬಂದು ಕೆಳಗೆ ಬಿದ್ದಿದ್ದಾರೆ.

ಕೂಡಲೇ ಅಕ್ಕಪಕ್ಕದಲ್ಲಿ ಕುಳಿತಿದ್ದ ಇತರ ಅಧಿಕಾರಿಗಳು ಶ್ರೀಧರ್ ಅವರಿಗೆ ಆರೈಕೆ ಮಾಡಿ, ಸುಧಾರಿಸಿಕೊಳ್ಳುವಂತೆ ಮಾಡಿದ್ದಾರೆ.

ಇದೇ ಕೆಡಿಪಿ ಸಭೆಯಲ್ಲಿ ಇನ್ನೊಂದು ಘಟನೆ ಕೂಡ ನಡೆದಿದೆ. ಸಭೆ ನಡೆಯುತ್ತಿದ್ದ ವೇಳೆ ಅದಿಕಾರಿಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಸಚಿವ ಡಾ.ಜಿ.ಪರಮೇಶ್ವರ್, ಅಧಿಕಾರಿಗೆ ಗೆಟ್ ಔಟ್ ಎಂದು ಸಭೆಯಿಂದಲೇ ಹೊರ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button