
ಪ್ರಗತಿವಾಹಿನಿ ಸುದ್ದಿ; ತುಮಕೂರು: ಮದುವೆಯ ದಿನ ಇನ್ನೇನು ವರ ಮಧುವಿಗೆ ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ಎದ್ದು ನಿಂತ ವಧು ತನಗೆ ಈ ಮದುವೆ ಬೇಡ ಇಷ್ಟವಿಲ್ಲ ಎಂದು ಮದುವೆಯನ್ನೇ ನಿಲ್ಲಿಸಿದ ಘಟನೆ ತುಮಕೂರು ಜಿಲ್ಲೆಯ ಕೋಳಾಲಗ್ರಾಮದಲ್ಲಿ ನಡೆದಿದೆ.
ವೆಂಕಟೇಶ್ ಹಾಗೂ ದಿವ್ಯಾ ಅವರ ವಿವಾಹ ಎರಡು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಇಂದು ವಿವಾಹ ಕಾರ್ಯಕ್ರಮ ನಡೆಯುವುದರಲ್ಲಿತ್ತು. ನಿನ್ನೆ ತುಮಕೂರು ಬಳಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ರಿಸೆಪ್ಶನ್ ನಡೆದಿತ್ತು. ರಿಸೆಪ್ಶನ್ ನಲ್ಲಿಯೂ ಚೆನ್ನಾಗಿ ಫೋಟೋಗೆ ಪೋಸ್ ನೀಡುತ್ತಾ, ಸಂತಸದಲ್ಲಿಯೇ ಇದ್ದ ವಧು ಬೆಳಗಾಗುವಷ್ಟರಲ್ಲಿ ಉಲ್ಟಾ ಹೊಡೆದಿದ್ದಾರೆ.
ಇಂದು ಬೆಳಿಗ್ಗೆ ಕಲ್ಯಾಣ ಮಂಟಪಕ್ಕೆ ವಧು ಹಾಗೂ ವರರ ಕುಟುಂಬ, ಸಂಬಂಧಿಕರು ಆಗಮಿಸಿದ್ದಾರೆ. ಇನ್ನೇನು ತಾಳಿಕಟ್ಟುವ ಶುಭ ಮುಹೂರ್ತ ವರ ವಧುವಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಯುವತಿ ಕ್ಯಾತೆ ತೆಗೆದಿದ್ದಾಳೆ. ನನಗೆ ಈ ಮದುವೆ ಇಷ್ಟವಿಲ್ಲ. ನಾನು ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಾಳೆ. ವರ ಹಾಗೂ ಆತನ ಕುಟುಂಬ ಶಾಕ್ ಆಗಿದೆ.
ಕಳೆದ ಎರಡು ತಿಂಗಳಿಂದ ಮದುವೆ ನಿಶ್ಚಯವಾದರೂ ಏನನ್ನೂ ಹೇಳದೇ ಮದು ಇಷ್ಟವಿದೆ ಎಂದು ಹೇಳಿದ್ದ ಯುವತಿ ದಿವ್ಯಾ, ಈಗ ಮದುವೆ ಮಂಟಪದಲ್ಲಿ ಮದುವೆ ಬೇಡ ಎಂದು ಹೇಳಿ ಮದುವೆಯನ್ನೇ ನಿಲ್ಲಿಸಿದ್ದಾಳೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಎರಡೂ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ