
ಪ್ರಗತಿವಾಹಿನಿ ಸುದ್ದಿ: ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ.
ಮುದಸ್ಸಿರ್ ಮತ್ತು ಮುಜಮ್ಮಿಲ್ ಮೃತ ದುರ್ದೈವಿಗಳು. ಮನೆಯ ಸಮೀಪದಲ್ಲಿದ್ದ ಕೆರೆಯ ಬಳಿ ಆಟವಾಡಲು ತೆರಳಿದ್ದಾರೆ. ಈ ವೇಳೆ ಇಬ್ಬರೂ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಸ್ಥಳದಲ್ಲಿ ರಕ್ಷಣೆಗೆ ಯಾರೂ ಇಲ್ಲದ ಕಾರಣ ಕರೆಯಲ್ಲಿ ಮುಳುಗಿ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.