Kannada NewsKarnataka NewsLatest

*ಭೀಕರ ಅಪಘಾತ; ಉಪನ್ಯಾಸಕ ಹಾಗೂ ಶಿಕ್ಷಕಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉಪನ್ಯಾಸಕ ಹಾಗೂ ಶಿಕ್ಷಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಉಲ್ಲಾಳದ ಮಾರುತಿನಗರದಲ್ಲಿ ನಡೆದಿದೆ.

ಕೆಂಗೇರಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ರಾಮಸಮುದ್ರದ ನಿವಾಸಿ ನರಸಪ್ಪ(51) ಹಾಗೂ ಕಿಡ್ಸ್ ಕೇರ್ ನ ಶಿಕ್ಶ್ಜಕಿ ಉಲ್ಲಾಳದ ರಕ್ಷಾ (21) ಮೃತರು. ಅಪಘಾತದಲ್ಲಿ ಚಂದನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಚಂದನ್ ಎಂಬುವವರು ಶಿಕ್ಷಕಿ ರಕ್ಷಾ ಅವರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಉಪನ್ಯಾಸಕ ನರಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದನ್ ಹಾಗೂ ರಕ್ಷಾ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಕ್ಷಾ ಅವರ ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.


Related Articles

Back to top button