Belagavi NewsBelgaum NewsCrimeKannada NewsKarnataka NewsNational

*ಘಟಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಸಮೀಪದ ಹಳೆ ಗುಡಗನಟ್ಟಿ ಗ್ರಾಮದ ಬಳಿ ಇರುವ ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ದುರದೃಷ್ಟಕರ ಘಟನೆ ನಡೆದಿದೆ. 

ಕೃಷ್ಣ ವಿಠ್ಠಲ್ ಖಾನಾಪುರಿ (14) ಮತ್ತು ಪ್ರಜ್ವಲ್ ಗೋಕಾರ್ (13) ಇಬ್ಬರು ಮೃತ ದುರ್ದೈವಿಗಳು. ಐವರು ಸ್ನೇಹಿತರ ಗುಂಪು ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಹೋದಾಗ ಈ ಅವಘಡ ಸಂಭವಿಸಿದೆ. ಈ ಇಬ್ಬರೂ ಬಾಲಕರು  ಹಳೆ ಗುಡಗನಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಆಟವಾಡುತ್ತಾ ನದಿಗೆ ಇಳಿದಾಗ ನೀರಿನ ಆಳ ತಿಳಿಯದೇ ಮುಳುಗಿ ಸಾವನ್ನಪ್ಪಿದ್ದಾರೆ.

ಯಮಕನಮರಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಇಬ್ಬರು ಬಾಲಕರ ಮೃತದೇಹ ಹೊರ ತೆಗೆಯಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Home add -Advt

Related Articles

Back to top button