Belagavi NewsBelgaum NewsKarnataka NewsPolitics
*ಬಣ್ಣ ಆಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬಣ್ಣ ಆಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ಯಕ್ಸಂಬಾ ಪಟ್ಟಣದ ವೇದಾಂತ ಹಿರೇಕೋಡಿ (11) ಹಾಗೂ ಮನೋಜ ಕಲ್ಯಾಣಿ (9) ಮೃತ ಬಾಲಕರು.
ಹೋಳಿ ಹಿನ್ನೆಲೆ ಬಣ್ಣ ಆಡಿ ಸಂಜೆ ಬಾವಿಗೆ ತೆರಳಿದ್ದ ಬಾಲಕರು ಈಜು ಬಾರದೆ ಸಾವನ್ನಪ್ಪಿದ್ದಾರೆ. ಬಾಲಕರ ಸಾವಿನ ವಿಷಯ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.