ಪ್ರಗತಿವಾಹಿನಿ ಸುದ್ದಿ: ವರುಣಾರ್ಭಟಕ್ಕೆ ನೇಪಾಳ ನಲುಗಿದ್ದು, ಅಪಾಯದಮಟ್ಟದಲ್ಲಿ ಹರಿಯುತ್ತಿದ್ದ ತ್ರಿಶೂಲಿ ನದಿಗೆ ಪ್ರಯಾಣಿಕರ ಎರಡು ಬಸ್ ಬಿದ್ದು ದುರಂತ ಸಂಭವಿಸಿರುವ ಘಟನೆ ನಡೆದಿದೆ.
ಎರಡು ಬಸ್ ಗಳು ನದಿಗೆ ಬಿದ್ದಿದ್ದು, 63 ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಮದನ್-ಆಶೀರ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಎರಡು ಬಸ್ ಗಳು ನದಿಗೆ ಉರುಳಿಬಿದ್ದಿವೆ.
ಎರಡೂ ಬಸ್ ಗಳು ತ್ರಿಶೂಲಿ ನದಿಯಲ್ಲಿ ಕೊಚ್ಚಿ ಹೋಗಿದ್ದು, 63 ಪ್ರಯಾಣಿಕರು ಕಣ್ಮರೆಯಾಗಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ ಎಂದು ಚಿತ್ವಾನ್ ಮುಖ್ಯ ಜಿಲ್ಲಾಧಿಕಾರಿ ಇಂದ್ರದೇವ್ ಯಾದವ್ ಮಾಹಿತಿ ನೀಡಿದ್ದಾರೆ.
ನೇಪಾಳ ಪ್ರಧಾನಿ ಪ್ರಯಾಣಿಕರನ್ನು ರಕ್ಷಿಸಲು ಹಾಗೂ ಪ್ರಯಾಣಿಕರ ಪತ್ತೆ ಮಾಡುವಂತೆ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ