
ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲು ಡಿಕ್ಕಿಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮೇದಿನಿಪುರ ಪಟ್ಟಣದ ರಂಗಮತಿ ಬಳಿ ನಡೆದಿದೆ.
ಮೇದಿನಿಪುರ ಪಟ್ಟಣದ ಹೊರವಲಯದ ಕಂಗ್ಸವತಿ ನದಿ ದಡದಲ್ಲಿರುವ ರಂಗಮತಿ ಸ್ಥಳ ಪಿಕ್ ನಿಕ್ ಸ್ಪಾಟ್ ಆಗಿದ್ದು, ಇದೇ ಸ್ಥಳದಲ್ಲಿ ರೈಲ್ವೆ ಹಳಿಯೊಂದು ಹಾದು ಹೋಗುತ್ತೆ. ಪ್ರವಾಸಕ್ಕೆಂದು ಬಂದಿದ್ದ ಯುವಕರ ಗುಂಪಿನ ಮೂವರು ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಈ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿಹೊಡೆದಿದೆ. ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮಿಥುನ್ ಖಾನ್, ಅಬ್ದುಲ್ ಖಾನ್ ಮೃತರು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕರು ರೈಲಿನ ಹಾರ್ನ್ ಕೇಳಿಯೂ ಎಚ್ಚೆತ್ತುಕೊಳ್ಳದೇ ಸೆಲ್ಫಿಯಲ್ಲಿ ನಿರತರಾಗಿದ್ದರು. ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸಚಿವರ ಪುತ್ರನ ಕಾರು ಭೀಕರ ಅಪಘಾತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ